Get Mystery Box with random crypto!

Kannada News Daily

टेलीग्राम चैनल का लोगो kannadanewsdaily — Kannada News Daily K
टेलीग्राम चैनल का लोगो kannadanewsdaily — Kannada News Daily
चैनल का पता: @kannadanewsdaily
श्रेणियाँ: समाचार
भाषा: हिंदी
ग्राहकों: 209

Ratings & Reviews

2.50

2 reviews

Reviews can be left only by registered users. All reviews are moderated by admins.

5 stars

0

4 stars

0

3 stars

1

2 stars

1

1 stars

0


नवीनतम संदेश 7

2021-06-27 16:18:11
Good News : ʼಆಸ್ತಿ ನೋಂದಣಿʼ ಸುಲಭಗೊಳಿಸಲು ಇಕೋರ್ಟ್- ಭೂ ದಾಖಲೆ ಜೋಡಣೆಗೆ ಕೇಂದ್ರ ಸರ್ಕಾರ ಚಿಂತನೆ

ಡಿಜಿಟಲ್‌ ಡೆಸ್ಕ್:‌ ಮಾರಾಟದ ಭೂಮಿ ಯಾವುದೇ ಕಾನೂನು ವಿವಾದದ ಅಡಿಯಲ್ಲಿದೆಯೇ ಎಂದು ನೈಜ ಖರೀದಿದಾರರಿಗೆ ತಿಳಿಯಲು ಸಹಾಯ ಮಾಡಲು ಇ-ನ್ಯಾಯಾಲಯವನ್ನ ಭೂ ದಾಖಲೆಗಳು ಮತ್ತು ನೋಂದಣಿ ನೆಲೆಯೊಂದಿಗೆ ಸಂಪರ್ಕಿಸಲು ಕೇಂದ್ರ ಯೋಜಿಸುತ್ತಿದೆ. ಜನರ ಆಕ್ರೋಶ ಕಂಡು ಬಿಜೆಪಿಯವರಿಗೆ ಭಯ ಬಂದಿದೆ - KPCC ಅಧ್ಯಕ್ಷ ಡಿ.ಕೆ.ಶಿವಕುಮಾರ್ ಇಲ್ಲಿಯವರೆಗೆ, ಭೂ ದಾಖಲೆಗಳು ಮತ್ತು ನೋಂದಣಿ ಡೇಟಾಬೇಸ್ʼನೊಂದಿಗೆ ಇಕೋರ್ಟ್ ಸಂಪರ್ಕಿಸುವ ಪ್ರಾಯೋಗಿಕ ಯೋಜನೆಯನ್ನ ಮಹಾರಾಷ್ಟ್ರ, ಉತ್ತರ ಪ್ರದೇಶ ಮತ್ತು ಹರಿಯಾಣದಲ್ಲಿ ಪೂರ್ಣಗೊಳಿಸಲಾಗಿದೆ.

View full article
45 views13:18
ओपन / कमेंट
2021-06-27 13:18:10
ರಾಜ್ಯದಲ್ಲಿ ಬಿಜೆಪಿ ಸರ್ಕಾರ ಸತ್ತಿದೆ: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್

ಕೊಳ್ಳೇಗಾಲ: ರಾಜ್ಯದಲ್ಲಿ ಬಿಜೆಪಿ ಸರ್ಕಾರ ಸತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಭಾನುವಾರ ವ್ಯಂಗ್ಯವಾಡಿದರು. ಕೋವಿಡ್‌ನಿಂದ ಮೃತಪಟ್ಟವರ ಕುಟುಂಬಗಳಿಗೆ ಸಾಂತ್ವನ ಹೇಳುವುದಕ್ಕಾಗಿ ಕಾಂಗ್ರೆಸ್ ಹಮ್ಮಿಕೊಂಡಿರುವ ಅಭಿಯಾನಕ್ಕೆ ಚಾಲನೆ ನೀಡಿ ಹಾಗೂ ಜಿಲ್ಲೆಯ ಕೋವಿಡ್ ಆಸ್ಪತ್ರೆಯಲ್ಲಿ ಸಂಭವಿಸಿದ ಆಮ್ಲಜನಕ ದುರಂತದಲ್ಲಿ ಮೃತಪಟ್ಟ ಪಾಳ್ಯ ಗ್ರಾಮದ ವ್ಯಕ್ತಿಯ ಕುಟುಂಬಕ್ಕೆ ಕೆಪಿಸಿಸಿ ವತಿಯಿಂದ ₹1 ಲಕ್ಷ ನೆರವು ನೀಡಿದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. 'ಚಾಮರಾಜನಗರದಲ್ಲಿ ನಡೆದ ಆಮ್ಲಜನಕ ದುರಂತ ಸರ್ಕಾರ ಮಾಡಿರುವ ಕೊಲೆ. ಈ ದುರಂತಕ್ಕೆ ಕಾರಣ ಇಲ್ಲಿನ ಅಧಿಕಾರಿಗಳು. ಘಟನೆ ನಡೆದು 57 ದಿನ ಕಳೆದರೂ ಯಾವ ಅಧಿಕಾರಿಗಳ ಮೇಲೂ ಇನ್ನೂ ಕ್ರಮಕೈಗೊಂಡಿಲ್ಲ. ಈ ಸರ್ಕಾರ ಅಧಿಕಾರಿಗಳ ಪರ ನಿಂತಿದೆಯೇ ವಿನಾ ಜನರ ಪರ ನಿಂತಿಲ್ಲ.

View full article
62 views10:18
ओपन / कमेंट
2021-06-27 10:18:07
ಭೀಕರ ಅಪಘಾತ- ಬಿಗ್‌ಬಾಸ್‌ ಖ್ಯಾತಿಯ ನಟ ಮಹೇಶ್‌ ಪ್ರಜ್ಞಾಹೀನ: ಐಸಿಯುನಲ್ಲಿ ಚಿಕಿತ್ಸೆ

ಹೈದರಾಬಾದ್: ಟಾಲಿವುಡ್‌ ನಟ, ನಿರ್ದೇಶಕ, ವಿಮರ್ಶಕ, ಬಿಗ್‌ಬಾಸ್‌ (ತೆಲಗು) ಖ್ಯಾತಿಯ ಕತ್ತಿ ಮಹೇಶ್‌ ಅವರು ಭೀಕರ ಅಪಘಾತವೊಂದಲ್ಲಿ ಗಾಯಗೊಂಡಿದ್ದು, ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಚಿತ್ತೂರಿನಿಂದ ಹೈದರಾಬಾದ್​ಗೆ ಮರಳುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. ಮಹೇಶ್‌ ಅವರು ಇನೋವಾ ಕಾರಿನಲ್ಲಿ ಪ್ರಯಾಣ ಮಾಡುತ್ತಿದ್ದರು. ಇವರ ಕಾರಿಗೆ ಟ್ರಕ್ ಡಿಕ್ಕಿಹೊಡೆದಿದೆ. ನೆಲ್ಲೂರಿನ ಹೊರವಲಯದ ಚಂದ್ರಶೇಖರಪುರಂ ಬಳಿ ಈ ಅಪಘಾತ ಸಂಭವಿಸಿದೆ. ಕಾರು ನಜ್ಜುಗುಜ್ಜಾಗಿದ್ದು, ಕಾರ್‌ನಲ್ಲಿ ಏರ್‌ಬ್ಯಾಗ್ ಓಪನ್ ಆಗಿದ್ದರಿಂದ ಮಹೇಶ್‌ಗೆ ಪ್ರಾಣಾಪಾಯವಾಗಲಿಲ್ಲ.

View full article
65 views07:18
ओपन / कमेंट
2021-06-27 07:18:06
ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ, ಜೂನ್27ರ ದರ ವಿವರ

ನವದೆಹಲಿ, ಜೂ. 27: ದೇಶದ ಪ್ರಮುಖ ಮೂರು ತೈಲ ಕಂಪನಿಗಳು ಪೆಟ್ರೋಲ್, ಡೀಸೆಲ್ ದರವನ್ನು ರವಿವಾರ (ಜೂನ್ 25) ದಂದು ಪರಿಷ್ಕರಣೆ ಮಾಡಿವೆ. ಜೂನ್ 27 ರಂದು ಪೆಟ್ರೋಲ್ ಬೆಲೆ ಪ್ರತಿ ಲೀಟರ್ ಮೇಲೆ 35 ಪೈಸೆ ಹಾಗೂ ಡೀಸೆಲ್ 25 ಪೈಸೆ ಏರಿಕೆಯಾಗಿದೆ. ಮೇ 4ರಿಂದ ಇಂದಿನ ತನಕ ಒಟ್ಟು 31 ಬಾರಿ ಬೆಲೆ ಏರಿಕೆ ಮಾಡಲಾಗಿದೆ. ಇಂದು ಇನ್ನೂ 4 ರಾಜ್ಯಗಳಲ್ಲಿ ಪೆಟ್ರೋಲ್ ಬೆಲೆ 100 ರು ಪ್ರತಿ ಲೀಟರ್ ದಾಟಿದೆ.

View full article
73 views04:18
ओपन / कमेंट
2021-06-26 19:18:05
ರಾಜ್ಯದ ಜನರಿಗೆ ಗುಡ್ ನ್ಯೂಸ್ : ಇನ್ಮುಂದೆ 'ಜನನ-ಮರಣ ನೊಂದಣಿ'ಗೆ 'ಸೇವಾಸಿಂಧು'ವಿನಲ್ಲಿ ಅರ್ಜಿ ಸಲ್ಲಿಸಿ ಪಡೆಯಬಹುದು

ಬೆಂಗಳೂರು : ಈಗಾಗಲೇ ಹಲವು ವಿನೂತನ ಕ್ರಮವನ್ನು ಕೈಗೊಂಡಿರುವಂತ ರಾಜ್ಯ ಸರ್ಕಾರವು, ಇದೀಗ ಸಾರ್ವಜನಿಕರಿಗೆ ಅನುಕೂಲ ಆಗುವ ನಿಟ್ಟಿನಲ್ಲಿ, ಸೇವಾಸಿಂಧು ತಂತ್ರಾಂಶದಲ್ಲಿ ಸಾರ್ವಜನಿಕರು ಜನನ-ಮರಣ ನೋಂದಣಿಗೆ ಅರ್ಜಿ ಸಲ್ಲಿಸಿ, ಪಡೆಯಲು ಅವಕಾಶ ಕಲ್ಪಿಸಿದೆ. ಜೆಡಿಎಸ್ 120 ಸೀಟ್ ಗೆಲ್ಲೋದಿಲ್ಲ, ಕುಮಾರಸ್ವಾಮಿ ಸಿಎಂ ಕೂಡ ಆಗಲ್ಲ : ಸ್ವಪಕ್ಷದ ವಿರುದ್ಧವೇ ಭವಿಷ್ಯ ನುಡಿದ JDS ಶಾಸಕ ಈ ಕುರಿತಂತೆ ರಾಜ್ಯ ಸರ್ಕಾರದ ಅಪರ ನಿರ್ದೇಶಕರು ಹಾಗೂ ಮುಖ್ಯ ನೋಂದಣಾಧಿಕಾರಿಗಳು ( ಜನನ-ಮರಣ) ಅವರು ಸುತ್ತೋಲೆ ಹೊರಡಿಸಿದ್ದು, ರಾಜ್ಯದಲ್ಲಿ ಜನನ-ಮರಣ ನೋಂದಣಿಯನ್ನು ಭಾರತ ಸರ್ಕಾರದ ಜನನ-ಮರಣ ನೋಂದಣಿ ಅಧಿನಿಯಮ 1969 ಹಾಗೂ ಕರ್ನಾಟಕ ಜನನ-ಮರಣ ನೋಂದಣಿ ನಿಯಮ 1999ರಂತೆ ನಿರ್ವಹಿಸಲಾಗುತ್ತಿದೆ.

View full article
21 views16:18
ओपन / कमेंट
2021-06-26 13:18:12
ಕೋವಿಡ್ ಲಾಕ್‌ಡೌನ್ ನಿರ್ಬಂಧದಿಂದ ಮೈಸೂರಿಗೆ ಕೊಂಚ ರಿಲ್ಯಾಕ್ಸ್

ಮೈಸೂರು, ಜೂನ್ 25: ಮೈಸೂರು ಜಿಲ್ಲೆಯನ್ನು ಸರ್ಕಾರ ಕೆಟಗಿರಿ 3ರಿಂದ ಮೇಲ್ದರ್ಜೆಗೆ ಸೇರಿಸಿ ಕೆಟಗೆರಿ 2ಕ್ಕೆ ಸೇರ್ಪಡೆ ಮಾಡಿದೆ. ಪರಿಣಾಮ ಕೋವಿಡ್ ಲಾಕ್‌ಡೌನ್ ನಿರ್ಬಂಧದಿಂದ ಸಾಂಸ್ಕೃತಿಕ ನಗರಿ ಮೈಸೂರಿಗೆ ಸ್ವಲ್ಪ ರಿಲ್ಯಾಕ್ಸ್ ಸಿಕ್ಕಿದೆ. "ರಾಜ್ಯ ಸರ್ಕಾರದ ಆದೇಶದ ಮೇರೆಗೆ ಲಾಕ್‌ಡೌನ್‌ನಲ್ಲಿ ಸಡಿಲಿಕೆ ಮಾಡಲಾಗಿದ್ದು, ಅನ್‌ಲಾಕ್ 1ರಂತೆ ಕೆಟಗಿರಿ 2ಕ್ಕೆ ಅನ್ವಯಿಸಿರುವ ನೀತಿ ನಿಯಮಗಳು ಜಾರಿಯಾಗಲಿವೆ,'' ಎಂದು ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ವೀಕೆಂಡ್ ಕರ್ಫ್ಯೂ; ಸಂಚಾರಕ್ಕೆ ಮುನ್ನ ಇದನ್ನ ತಿಳಿದಿರಿ "ಮೈಸೂರಿನಲ್ಲಿ ಶೇ.10ಕ್ಕಿಂತ ಜಾಸ್ತಿ ಇದ್ದ ಪಾಸಿಟಿವಿಟಿ ದರ ಶೇ.5- 10ರೊಳಗೆ ಬಂದಿದೆ.

View full article
10 views10:18
ओपन / कमेंट
2021-06-26 13:18:05
ಚಿನ್ನದ ಬೆಲೆಯಲ್ಲಿ ಮತ್ತೆ ಏರಿಕೆ; ಜೂನ್ 26ರಂದು 10 ಗ್ರಾಂ ಬೆಲೆ ಎಷ್ಟಿದೆ?

ನವದೆಹಲಿ, ಜೂನ್ 26: ಜೂನ್ ತಿಂಗಳ ಮಧ್ಯದಿಂದ ಸತತ ಇಳಿಕೆ ಕಂಡಿದ್ದ ಚಿನ್ನದ ಬೆಲೆ ಶನಿವಾರ ಏರಿಕೆಯಾಗಿದೆ. ಜೂನ್ ತಿಂಗಳಿನಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಚಿನ್ನದ ವಾಹಿವಾಟು ಕುಸಿತ ಕಂಡಿತ್ತು. ನಿರಂತರವಾಗಿ ಚಿನ್ನದ ಬೆಲೆ ಕಡಿಮೆಯಾಗಿತ್ತು. ಜೂನ್ 25ರಂದು ಕೂಡ ಬೆಲೆ ತಗ್ಗಿತ್ತು. ಇದೀಗ ಶನಿವಾರ ಕೊಂಚ ಏರಿಕೆಯಾಗಿದೆ. ದೇಶದ ರಾಜಧಾನಿ ನವದೆಹಲಿಯಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ 100 ರೂ ಏರಿಕೆಯಾಗಿ 46,250 ರೂ ಆಗಿದೆ.

View full article
10 views10:18
ओपन / कमेंट
2021-06-26 10:18:09
ಉಡುಪಿ: ನಾಟಿ ಮಾಡಿ ಟ್ರ್ಯಾಕ್ಟರ್ ಓಡಿಸಿದ ಕೃಷಿ ಸಚಿವ ಬಿ.ಸಿ. ಪಾಟೀಲ್‌

ಉಡುಪಿ: ತಾಲ್ಲೂಕಿನ ಕಡೆಕಾರಿನಲ್ಲಿ ಶನಿವಾರ ಕೃಷಿ ಸಚಿವ ಬಿ.ಸಿ. ಪಾಟೀಲ್‌ ಭತ್ತದ ಗದ್ದೆಗಿಳಿದು ನಾಟಿ ಮಾಡಿದರು. ಕೆಸರು ಗದ್ದೆಯಲ್ಲಿ ಟ್ರಾಕ್ಟರ್‌ ಓಡಿಸಿದರು. ಕೃಷಿ ಚಟುವಟಿಕೆಗಳಲ್ಲಿ ಭಾಗವಹಿಸಿ ಸಂಭ್ರಮಿಸಿದರು. ಕೇದಾರೋತ್ಥಾನ ಟ್ರಸ್ಟ್‌ನಿಂದ ತಾಲ್ಲೂಕಿನಾದ್ಯಂತ ಹಡಿಲುಭೂಮಿ ಕೃಷಿ ಆಂದೋಲನ ನಡೆಯುತ್ತಿದ್ದು, ಸಚಿವ ಬಿ.ಸಿ.ಪಾಟೀಲ್ ಕೂಡ ನಾಟಿ ಕಾರ್ಯದಲ್ಲಿ ಭಾಗವಹಿಸಿ ಅಭಿಯಾನಕ್ಕೆ ಕೈಜೋಡಿಸಿದರು. ಬಳಿಕ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಸಚಿವರು, 'ನನಗೆ ಕೃಷಿ ಹೊಸದಲ್ಲ, ನಾನೂ ರೈತನ ಮಗನೇ. ರಂಟೆ ಹೊಡೆದಿದ್ದೇನೆ, ಸಲಕೆ ಹಿಡಿದು ಕೆಲಸ ಮಾಡಿದ್ದೇನೆ, ನಾಟಿ ಮಾಡಿದ್ದೇನೆ. ಪೊಲೀಸ್ ಅಧಿಕಾರಿ ಹಾಗೂ ನಟನಾದ ಬಳಿಕ ಕೃಷಿ ಕಾರ್ಯ ಮರೆತುಹೋದಂತಾಗಿತ್ತು. ಈಗ ಮತ್ತೆ ಹಳೆ ನೆನಪುಗಳು ಮರುಕಳಿಸಿದಂತಾಯಿತು' ಎಂದರು.

View full article
33 views07:18
ओपन / कमेंट
2021-06-26 10:18:06
'ರಾಮ ಸೇತುವನ್ನು ರಾಷ್ಟ್ರೀಯ ಸ್ಮಾರಕವೆಂದು ಘೋಷಿಸಬೇಕು': ಕೇಂದ್ರ ಸಚಿವ ಪ್ರಹ್ಲಾದ್ ಪಟೇಲ್

ನವದೆಹಲಿ, ಜೂ.26: ಪೌರಾಣಿಕ ರಾಮ ಸೇತುವನ್ನು ರಾಷ್ಟ್ರೀಯ ಸ್ಮಾರಕವೆಂದು ಘೋಷಿಸುವ ಸಾಧ್ಯತೆಯಿದೆ. ಈ ವಿಚಾರದಲ್ಲಿ ಸುಳಿವು ನೀಡಿರುವ ಕೇಂದ್ರ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಸಚಿವ ಪ್ರಹ್ಲಾದ್ ಸಿಂಗ್ ಪಟೇಲ್, ''ರಾಮ ಸೇತುವನ್ನು ವಿಶ್ವ ಪರಂಪರೆಯ ತಾಣಗಳ ಪಟ್ಟಿಯಲ್ಲಿ ಸೇರಿಸಬೇಕು,'' ಎಂದು ಹೇಳಿದ್ದಾರೆ. ಈ ಬಗ್ಗೆ ಟೈಮ್ಸ್‌ ಆಪ್‌ ಇಂಡಿಯಾ.ಕಾಮ್‌ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಮಾಹಿತಿ ನೀಡಿದ ಪ್ರಹ್ಲಾದ್ ಪಟೇಲ್, ''ರಾಮ ಸೇತುವನ್ನು ರಾಷ್ಟ್ರೀಯ ಸ್ಮಾರಕವೆಂದು ಘೋಷಿಸುವ ಬೇಡಿಕೆ ಈಗ ಇದೆ. ವೈಯಕ್ತಿಕ ಮಟ್ಟದಲ್ಲಿ, ರಾಮಸೇತು ರಾಷ್ಟ್ರೀಯ ಸ್ಮಾರಕವೆಂದು ಘೋಷಿಸಲ್ಪಟ್ಟಿದೆ ಎಂದು ನಾನು ನಂಬುತ್ತೇನೆ. ನಾವು ಇಲ್ಲಿಯವರೆಗೆ ಹೊಂದಿರುವ ಜ್ಞಾನದ ಪ್ರಕಾರ, ವಾಸ್ತವವಾಗಿ ಇದನ್ನು ವಿಶ್ವ ಪರಂಪರೆಯ ತಾಣಗಳ ಪಟ್ಟಿಯಲ್ಲಿ ಸೇರಿಸಬೇಕು.

View full article
34 views07:18
ओपन / कमेंट
2021-06-26 10:18:03
ಕೊಲೆ ಆರೋಪಿ ಸುಶೀಲ್​​ ಕುಮಾರ್​ ಜೊತೆ ಸೆಲ್ಫಿಗಾಗಿ ಮುಗಿಬಿದ್ದ ಪೊಲೀಸ್

ಕೊಲೆ ಪ್ರಕರಣದ ಆರೋಪಿ ಕುಸ್ತಿ ಪಟು ಸುಶೀಲ್​ ಕುಮಾರ್​ ಜೊತೆ ದೆಹಲಿ ಪೊಲೀಸರು ಸೆಲ್ಫಿ ಸೆಷನ್​ ನಡೆಸಿದ್ದು ಈ ಫೋಟೊಗಳು ವೈರಲ್​ ಆದ ಬಳಿಕ ತನಿಖೆ ನಡೆಸಲು ಸೂಚನೆ ನೀಡಲಾಗಿದೆ. ದೆಹಲಿ ಸಶಸ್ತ್ರ ಪೊಲೀಸರ ವಿಶೇಷ ತಂಡ ಹಾಗೂ 3ನೇ ಬೆಟಾಲಿಯನ್​ ಪೊಲೀಸರು ಸುಶೀಲ್​ ಕುಮಾರ್​ರನ್ನ ಶುಕ್ರವಾರ ಬೆಳಗ್ಗೆ ಮಂಡೋಲಿ ಜೈಲಿನಿಂದ ತಿಹಾರ್​ ಜೈಲಿಗೆ ಕರೆದೊಯ್ಯುತ್ತಿದ್ದ ವೇಳೆಯಲ್ಲಿ ಈ ಫೋಟೊಗಳನ್ನ ಕ್ಲಿಕ್ಕಿಸಲಾಗಿದೆ. ದೆಹಲಿ ನ್ಯಾಯಾಲವು ಸುಶೀಲ್​ ಕುಮಾರ್​ ನ್ಯಾಯಾಂಗ ಬಂಧನವನ್ನ ಜುಲೈ 9ರವರೆಗೆ ವಿಸ್ತರಿಸಿದೆ. ಮಹಿಳಾವಾದಿಗೆ ವರ ಬೇಕಾಗಿದ್ದಾನೆ..! ಇಲ್ಲಿದೆ ಜಾಹೀರಾತಿನ ಹಿಂದಿನ ಅಸಲಿ ಸತ್ಯ ಕುಸ್ತಿಪಟು ಸಾಗರ್​ ಧಂಕರ್​​ರ ಕೊಲೆ ಆರೋಪದ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ಸುಶೀಲ್​ ಕುಮಾರ್​ರನ್ನ ಪೊಲೀಸರು ಬಂಧಿಸಿದ್ದಾರೆ.

View full article
31 views07:18
ओपन / कमेंट