Get Mystery Box with random crypto!

Kannada News Daily

टेलीग्राम चैनल का लोगो kannadanewsdaily — Kannada News Daily K
टेलीग्राम चैनल का लोगो kannadanewsdaily — Kannada News Daily
चैनल का पता: @kannadanewsdaily
श्रेणियाँ: समाचार
भाषा: हिंदी
ग्राहकों: 209

Ratings & Reviews

2.50

2 reviews

Reviews can be left only by registered users. All reviews are moderated by admins.

5 stars

0

4 stars

0

3 stars

1

2 stars

1

1 stars

0


नवीनतम संदेश 5

2021-06-30 07:18:08
ಗ್ರಾಹಕರೇ ಗಮನಿಸಿ: ಜುಲೈ1 ರಿಂದ ಆಗಲಿದೆ ಈ 7 ಬದಲಾವಣೆ

ಕೊರೊನಾ ಸಾಂಕ್ರಾಮಿಕ ಸಂಕಷ್ಟದ ಸಂದರ್ಭದಲ್ಲಿ ಅಗತ್ಯ ವಸ್ತುಗಳ ಕೊರತೆ, ಲಾಕ್ ಡೌನ್ ದೆಸೆಯಿಂದ ಕೊಳ್ಳುವಿಕೆಗೆ ಇದ್ದ ತಡೆ ಈಗ ತೆರವಾಗಿದೆ. ಆನ್ ಲೈನ್ ಮಾರುಕಟ್ಟೆ ಚಾಲನೆಯಲ್ಲಿದ್ದರೂ ದಿನದಿಂದ ದಿನಕ್ಕೆ ಅನೇಕ ವಸ್ತುಗಳ ದರ ಏರಿಕೆಯಾಗುತ್ತಿವೆ. ಜುಲೈ 1ರಿಂದ ಪ್ರಮುಖ 7 ಬದಲಾವಣೆಗಳಾಗಲಿದ್ದು, ಜನ ಸಾಮಾನ್ಯರ ಜೇಬಿಗೆ ಇನ್ನಷ್ಟು ಕತ್ತರಿ ಬೀಳುವ ಸಾಧ್ಯತೆಗಳಿವೆ. ಕೋವಿಡ್ 19 ಹೊಡೆತದಿಂದ ತತ್ತರಿಸಿರುವ ವಿವಿಧ ಕ್ಷೇತ್ರಗಳಿಗೆ ಕೇಂದ್ರ ಸರ್ಕಾರ ಇತ್ತೀಚೆಗೆ ಆರ್ಥಿಕ ಪ್ಯಾಕೇಜ್ ಘೋಷಿಸಿದೆ.ಕೋವಿಡ್‌ ಕುರಿತ ಎಲ್ಲಾ ಲೇಟೆಸ್ಟ್‌ ಅಪ್‌ಡೇಟ್ಸ್‌ ಓದಿ

View full article
14 views04:18
ओपन / कमेंट
2021-06-30 04:18:09
ಭಾರತ ಭೂಪಟ ತಿರುಚಿದ ವಿವಾದ; ಟ್ವಿಟರ್‌ ವಿರುದ್ಧ 3 ರಾಜ್ಯಗಳಲ್ಲಿ ದೂರು

ನೋಯ್ಡಾ/ನವದೆಹಲಿ: ಸಾಮಾಜಿಕ ಜಾಲತಾಣ ಟ್ವಿಟರ್‌ ವಿರುದ್ಧ ಮಂಗಳವಾರ ವಿವಿಧ ಕಡೆಗಳಲ್ಲಿ ಎಫ್‌ಐಆರ್‌ ದಾಖಲಾಗಿವೆ. ಭಾರತದ ತಿರುಚಿದ ಭೂಪಟ ಪ್ರಕಟಿಸಿದ್ದಕ್ಕಾಗಿ ಉತ್ತರಪ್ರದೇಶ ಹಾಗೂ ಮಧ್ಯಪ್ರದೇಶದಲ್ಲಿ ಎಫ್‌ಐಆರ್‌ ದಾಖಲಾಗಿದ್ದರೆ, ಮಕ್ಕಳ ಅಶ್ಲೀಲ ಚಿತ್ರಗಳನ್ನು ಪ್ರಸಾರ ಮಾಡಿದ ಆರೋಪದ ಮೇಲೆ ದೆಹಲಿ ಪೊಲೀಸರು ಎಫ್‌ಐಆರ್‌ ದಾಖಲಿಸಿದ್ದಾರೆ. ಜಾಲತಾಣದಲ್ಲಿ ಭಾರತದ ಭೂಪಟ ತಪ್ಪಾಗಿ ತೋರಿಸಿದ್ದನ್ನು ಪ್ರಶ್ನಿಸಿ ಬಜರಂಗದಳದ ಪದಾಧಿಕಾರಿಯೊಬ್ಬರು ನೀಡಿದ ದೂರಿನ ಆಧಾರದಲ್ಲಿ ಉತ್ತರ ಪ್ರದೇಶದ ಬುಲಂದ್‌ಶಹರ್‌ ಜಿಲ್ಲೆಯ ಪೊಲೀಸರು ಟ್ವಿಟರ್‌ ಇಂಡಿಯಾ ವಿರುದ್ಧ ಎಫ್‌ಐಆರ್‌ ದಾಖಲಿಸಿದ್ದಾರೆ.

View full article
28 views01:18
ओपन / कमेंट
2021-06-29 16:18:11
ಮಂಗಳೂರು: ಕಾಂಗ್ರೆಸ್ ಭವನದಲ್ಲಿ ಕುದ್ಮುಲ್ ರಂಗರಾವ್ ಜನ್ಮದಿನಾಚರಣೆ

ಮಂಗಳೂರು, ಜೂ.29: ದಲಿತೋದ್ಧಾರಕ ಕುದ್ಮುಲ್ ರಂಗರಾವ್ ಅವರ 162ನೇ ಜನ್ಮದಿನಾಚರಣೆಯನ್ನು ಮಂಗಳೂರು ನಗರ ಬ್ಲಾಕ್ ಕಾಂಗ್ರೆಸ್ ಪರಿಶಿಷ್ಟ ವರ್ಗದ ಘಟಕದ ವತಿಯಿಂದ ಇಂದು ಕದ್ರಿ ಮಲ್ಲಿಕಟ್ಟೆಯಲ್ಲಿರುವ ಕಾಂಗ್ರೆಸ್ ಭವನದಲ್ಲಿ ಜರಗಿತು. ರಂಗ ರಾಯರ ಭಾವಚಿತ್ರಕ್ಕೆ ಮಾಲಾರ್ಪಣೆಗೈದು ಮಾತನಾಡಿದ ಮಾಜಿ ಶಾಸಕ ಜೆ. ಆರ್.ಲೋಬೊ, ದಿ.ಕುದ್ಮುಲ್ ರಂಗರಾವ್ ರಲ್ಲಿದ್ದ ಸಾಮಾಜಿಕ ಬದ್ಧತೆ, ದಲಿತೋದ್ಧಾರದ ಪರಿಕಲ್ಪನೆ, ಸ್ವಾರ್ಥರಹಿತ ಸೇವಾ ಮನೋಭಾವ ಅವರನ್ನು ಸಮಾಜದ ಉನ್ನತ ಸ್ಥಾನಕ್ಕೆ ಏರಿಸಿತ್ತು ಎಂದರು. ಬ್ಲಾಕ್ ಅಧ್ಯಕ್ಷ ಪ್ರಕಾಶ್ ಸಾಲ್ಯಾನ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಮಾಜಿ ಮೇಯರ್ ಶಶಿಧರ್ ಹೆಗ್ಡೆ, ಪಾಲಿಕೆ ವಿಪಕ್ಷ ನಾಯಕ ಎ.ಸಿ.ವಿನಯ್ ರಾಜ್, ಮಾಜಿ ಉಪ ಮೇಯರ್ ರಜನೀಶ್, ಮೋಹನಾಂಗಯ್ಯ ಸ್ವಾಮಿ, ಹೊನ್ನಯ್ಯ ಮಾತನಾಡಿದರು.

View full article
33 views13:18
ओपन / कमेंट
2021-06-29 16:18:07
ಚಿನ್ನದ ಬೆಲೆ ಕುಸಿತ: ದೇಶದ ಪ್ರಮುಖ ನಗರಗಳಲ್ಲಿ ಜೂನ್ 29ರ ಬೆಲೆ ಹೀಗಿದೆ

ಭಾರತೀಯ ಮಾರುಕಟ್ಟೆಯಲ್ಲಿ ಹಳದಿ ಲೋಹದ ಬೆಲೆ ಮಂಗಳವಾರ (ಜೂನ್ 29) ಕೊಂಚ ಇಳಿಕೆಗೊಂಡಿದೆ. ದೆಹಲಿಯಲ್ಲಿ 22 ಕ್ಯಾರೆಟ್ ಚಿನ್ನ 10 ಗ್ರಾಂ 46,150 ರೂಪಾಯಿ ತಲುಪಿದೆ. ಶುದ್ಧ ಚಿನ್ನ 10 ಗ್ರಾಂ 50,250 ರೂಪಾಯಿ ಮುಟ್ಟಿದೆ. ಇದರ ನಡುವೆ ಬೆಳ್ಳಿ ಬೆಲೆಯು ಕೆಜಿಗೆ 100 ರೂಪಾಯಿ ಏರಿಕೆಗೊಂಡು 68,000 ರೂಪಾಯಿ ದಾಖಲಾಗಿದೆ. ಭಾರತದ ಪ್ರಮುಖ ನಗರಗಳಲ್ಲಿ ಚಿನ್ನ 10 ಗ್ರಾಂ ಹಾಗೂ ಬೆಳ್ಳಿ ಕೆಜಿಗೆ ಬೆಲೆ ಎಷ್ಟಿದೆ ಹಾಗೂ ಎಷ್ಟು ಕಡಿಮೆ ಆಗಿದೆ ಎಂಬುದರ ಮಾಹಿತಿ ಈ ಕೆಳಗಿದೆ. ರಾಜ್ಯದ ಪ್ರಮುಖ ನಗರಗಳು ನಗರ: ಬೆಂಗಳೂರು 22ಕ್ಯಾರೆಟ್ ಚಿನ್ನ ರೂ.

View full article
31 views13:18
ओपन / कमेंट
2021-06-29 10:18:07
ಬಿಟ್‌ಕಾಯಿನ್ ಸೇರಿದಂತೆ ಇತರೆ ಕ್ರಿಪ್ಟೋಕರೆನ್ಸಿಗಳ ಜೂನ್ 29ರ ಬೆಲೆ ತಿಳಿದುಕೊಳ್ಳಿ

ಸದ್ಯ ವಿಶ್ವದೆಲ್ಲೆಡೆ ಕ್ರಿಪ್ಟೋಕರೆನ್ಸಿಗಳ ಸದ್ದು ಜೋರಾಗಿದ್ದು, ವಿಶ್ವದ ಅನೇಕ ರಾಷ್ಟ್ರಗಳಲ್ಲಿ ನಿಷೇಧವಿದ್ದರೂ ಬೇಡಿಕೆ ಮಾತ್ರ ಸಂಪೂರ್ಣವಾಗಿ ತಗ್ಗಿಲ್ಲ, ಡಿಜಿಟಲ್ ಕರೆನ್ಸಿಗಳ ಕುರಿತು ಚರ್ಚೆ ಮುಂದುವರಿದಿದೆ. ಭಾರತದಲ್ಲಿ ಆರ್‌ಬಿಐ ನಿರ್ದೇಶನವಿದ್ದರೂ ಕ್ರಿಪ್ಟೋಕರೆನ್ಸಿಗಳ ಮೇಲೆ ಭಾರತೀಯರು ಬಿಲಿಯನ್ ಡಾಲರ್‌ಗಳಷ್ಟು ಹಣ ಹೂಡಿಕೆ ಮಾಡಿದ್ದಾರೆ. ಹೀಗಾಗಿ ಅನೇಕ ಕ್ರಿಪ್ಟೋಕರೆನ್ಸಿಗಳ ದರಗಳು ಇನ್ನೂ ಹೆಚ್ಚಿನ ಮಟ್ಟದಲ್ಲಿಯೇ ಉಳಿದಿದೆ. ಹಾಗಿದ್ದರೆ ಬಿಟ್‌ಕಾಯಿನ್ ಕ್ರಿಪ್ಟೋ ಕರೆನ್ಸಿ, ಡಾಗ್‌ಕಾಯಿನ್ ಕ್ರಿಪ್ಟೋ ಕರೆನ್ಸಿ, ಎಕ್ಸ್‌ಆರ್‌ಪಿ ಕ್ರಿಪ್ಟೋ ಕರೆನ್ಸಿ ಮತ್ತು ಎಥೆರಿಯಮ್ ಕ್ರಿಪ್ಟೋ ಕರೆನ್ಸಿಯ ಇತ್ತೀಚಿನ ದರ ಎಷ್ಟಿದೆ ಎಂಬುದರ ಮಾಹಿತಿ ತಿಳಿಯಲು ಈ ಕೆಳಗೆ ಓದಿ. ಬಿಟ್‌ಕಾಯಿನ್‌ ಬಿಟ್‌ಕಾಯಿನ್ ಕ್ರಿಪ್ಟೋಕರೆನ್ಸಿಯ ದರವು ಪ್ರಸ್ತುತ 34,733.67 ಡಾಲರ್‌ನಷ್ಟಿದೆ. ಇದು ಪ್ರಸ್ತುತ ಶೇ.

View full article
51 views07:18
ओपन / कमेंट
2021-06-29 07:18:08
ಕೊರೊನಾ ಸೋಂಕಿಗೆ ಬಲಿಯಾದವರಲ್ಲಿ ಯಾವ ವಯಸ್ಸಿನವರ ಪ್ರಮಾಣ ಹೆಚ್ಚಿದೆ...

ನವದೆಹಲಿ, ಜೂನ್ 29: ದೇಶದಲ್ಲಿ ಕೊರೊನಾ ಸೋಂಕು 50ರ ವಯೋಮಾನದ ಒಳಗಿನವರನ್ನು ಹೆಚ್ಚಾಗಿ ಬಲಿ ಪಡೆದಿದೆ ಎಂದು ದೆಹಲಿಯ ಏಮ್ಸ್‌ ನಡೆಸಿದ ಇತ್ತೀಚಿನ ಅಧ್ಯಯನ ತಿಳಿಸಿದೆ. ಕೊರೊನಾ ಸೋಂಕಿನಿಂದ ಸಂಭವಿಸಿದ ಮರಣ ಪ್ರಮಾಣ ಹಾಗೂ ಸೋಂಕಿನಿಂದ ಯಾವ ವಯೋಮಾನದವರ ಮರಣ ಪ್ರಮಾಣ ಹೆಚ್ಚಿದೆ ಎಂಬ ಕುರಿತು ಏಮ್ಸ್ ಅಧ್ಯಯನ ನಡೆಸಿದ್ದು, ಇದರಲ್ಲಿ ಏಮ್ಸ್ ನಿರ್ದೇಶಕ ರಣದೀಪ್ ಗುಲೇರಿಯಾ, ಏಮ್ಸ್‌ ಟ್ರೌಮಾ ಸೆಂಟರ್‌ ಮುಖ್ಯಸ್ಥ ಡಾ. ರಾಕೇಶ್ ಮಲ್ಹೋತ್ರಾ ಹಾಗೂ ಇನ್ನಿತರರು ಭಾಗಿಯಾಗಿದ್ದರು. ಇಂಡಿಯನ್ ಜರ್ನಲ್ ಆಫ್ ಕ್ರಿಟಿಕಲ್ ಕೇರ್ ಮೆಡಿಸನ್‌ನಲ್ಲಿ ಈ ಅಧ್ಯಯನವನ್ನು ಪ್ರಕಟಿಸಲಾಗಿದ್ದು, ಕಳೆದ ವರ್ಷ ಏಪ್ರಿಲ್ 4ರಿಂದ ಜುಲೈ 24ರ ಅವಧಿಯಲ್ಲಿ ಸಾವನ್ನಪ್ಪಿದ ಕೊರೊನಾ ರೋಗಿಗಳ ಪ್ರಾಥಮಿಕ ಮೌಲ್ಯಮಾಪನವನ್ನು ನಡೆಸಲಾಗಿದೆ. ಮುಂದೆ ಓದಿ... 18-50ರ ವಯೋಮಾನದವರ ಮರಣ ಪ್ರಮಾಣ 42.1% ಭಾರತದಲ್ಲಿ ತೆರೆಯಲಾದ ಕೋವಿಡ್ ಕೇಂದ್ರಗಳಿಗೆ ದಾಖಲಾದ ರೋಗಿಗಳ ಮರಣ ಪ್ರಮಾಣ ಹಾಗೂ ಮರಣಕ್ಕೆ ಕಾರಣಗಳನ್ನು ಕಂಡುಕೊಳ್ಳಲು ಈ ಏಮ್ಸ್ ಅಧ್ಯಯನ ನಡೆಸಿದೆ.ಕೋವಿಡ್‌ ಕುರಿತ ಎಲ್ಲಾ ಲೇಟೆಸ್ಟ್‌ ಅಪ್‌ಡೇಟ್ಸ್‌ ಓದಿ

View full article
49 views04:18
ओपन / कमेंट
2021-06-29 07:18:05
ಪೆಟ್ರೋಲ್, ಡೀಸೆಲ್ ದರ ಮತ್ತೆ ಹೆಚ್ಚಳ: ಜೂನ್ 29ರಂದು ಲೀಟರ್‌ಗೆ ಎಷ್ಟು ರೂಪಾಯಿ?

ಸರ್ಕಾರಿ ಸ್ವಾಮ್ಯದ ತೈಲ ಸಂಸ್ಥೆಗಳು ಒಂದು ದಿನದ ವಿರಾಮದ ಬಳಿಕ ಮಂಗಳವಾರ(ಜೂನ್ 29) ಪೆಟ್ರೋಲ್, ಡೀಸೆಲ್ ದರವನ್ನ ಏರಿಕೆ ಮಾಡಿವೆ. ಈ ಮೂಲಕ ತೈಲ ಬೆಲೆಯು ಮತ್ತಷ್ಟು ಎತ್ತರಕ್ಕೆ ಜಿಗಿದಿದ್ದು, ವಾಹನ ಸವಾರರು ಪರಿತಪಿಸುವಂತಾಗಿದೆ. ನವದೆಹಲಿಯಲ್ಲಿ ಪೆಟ್ರೋಲ್ ದರ ಲೀಟರ್‌ಗೆ 35 ಪೈಸೆ ಹೆಚ್ಚಾಗಿ 98.81 ರೂಪಾಯಿಗೆ ತಲುಪಿದೆ. ಡೀಸೆಲ್ ದರ ಲೀಟರ್‌ಗೆ 28 ಪೈಸೆ ಏರಿಕೆಗೊಂಡು 89.18 ರೂಪಾಯಿ ದಾಖಲಾಗಿದೆ. ದೇಶದ ಪ್ರಮುಖ ನಗರಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರ ಕಳೆದ ನಾಲ್ಕು ದಿನಗಳಲ್ಲಿ ಎಷ್ಟಿದೆ ಎಂಬುದರ ಮಾಹಿತಿ ಈ ಕೆಳಗಿದೆ.

View full article
48 views04:18
ओपन / कमेंट
2021-06-28 22:18:12
'ಕೊರೊನಾ' ಕಣ್ಣೀರ ಕಥೆ: ಮಕ್ಕಳ ಜೀವ, ಜೀವನ ಕಸಿಯುತ್ತಿದೆ ಡೆಡ್ಲಿ ವೈರಸ್..!

ಜಗತ್ತನ್ನು ಬೇರೆ ಯಾವುದೇ ರೋಗ ಕಾಡದಷ್ಟು ಆಳವಾಗಿ ಕಾಡಿದ್ದು ಇದೇ ಕೊರೊನಾ ವೈರಸ್. ಕೊರೊನಾ ಕಾಟಕ್ಕೆ ಪ್ರಪಂಚವೇ ಬೆಚ್ಚಿಬಿದ್ದಿದೆ. ಒಂದು ಕಡೆ ಕೋಟ್ಯಂತರ ಜನರು ಕೊರೊನಾ ಸೋಂಕಿನಿಂದ ನರಳಿ ನರಳಿ ಜೀವ ಉಳಿಸಿಕೊಂಡಿದ್ದರೆ, ಹತ್ತಾರು ಲಕ್ಷ ಜನರು 'ಕೊರೊನಾ' ಸೋಂಕಿಗೆ ಬಲಿಯಾಗಿದ್ದಾರೆ. ಆದರೆ ವಿಷಯ ಇದಲ್ಲ, ಅತ್ತ ಕೊರೊನಾ ಅಬ್ಬರಿಸುವಾಗಲೇ ಇತ್ತ ಸದ್ದಿಲ್ಲದೆ ಮಕ್ಕಳ ಭವಿಷ್ಯ ಮುಗಿದು ಹೋಗುತ್ತಿದೆ. ಮಕ್ಕಳು ತಾವು ಮಾಡದ ತಪ್ಪಿಗೆ ಬಲಿಪಶುವಾಗಿ ಭವಿಷ್ಯವನ್ನೇ ಕಳೆದುಕೊಳ್ಳುತ್ತಿದ್ದಾರೆ. ಬಾಲಕಾರ್ಮಿಕರ ಬಗ್ಗೆ ವಿಶ್ವಸಂಸ್ಥೆ ಹಾಗೂ ವಿಶ್ವ ಕಾರ್ಮಿಕ ಸಂಘಟನೆ ನಡೆಸಿದ ಸಂಶೋಧನೆ ಬೆಚ್ಚಿ ಬೀಳಿಸಿದೆ. ಕಳೆದ 4 ವರ್ಷದಲ್ಲಿ ಬರೋಬ್ಬರಿ 80 ಲಕ್ಷ ಮಕ್ಕಳು ಬಾಲಕಾರ್ಮಿಕ ಪದ್ಧತಿಗೆ ಬಲಿಯಾಗಿದ್ದಾರೆ. ಆಟವಾಡಿ ನಲಿಯಬೇಕಿದ್ದವರು ನರಳಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

View full article
53 views19:18
ओपन / कमेंट
2021-06-28 22:18:08
ಪರಿಶೀಲನೆಗೆ ಬಂದ ಸಚಿವ ಅಂಗಾರ, ಶಾಸಕ ಉಮಾನಾಥ ಕೋಟ್ಯಾನ್‌ಗೆ ಗ್ರಾಮಸ್ಥರಿಂದ ಘೇರಾವ್

ಮೂಡುಬಿದಿರೆ, ಜೂ.28: ಕಲ್ಲಮುಂಡ್ಕೂರು ಗ್ರಾಪಂ ವ್ಯಾಪ್ತಿಯ ನಿಡ್ಡೋಡಿ ಗ್ರಾಮದ ಕೊಳತ್ತಾರು ಪದವು ಸರಕಾರಿ ಜಾಗದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಸರಕಾರದ ಬೃಹತ್ ಸೀಫುಡ್ ಕಾರ್ಖಾನೆಯ ಸ್ಥಳ ಪರಿಶೀಲನೆಗೆ ಆಗಮಿಸಿದ ಬಂದರು ಮತ್ತು ಮೀನುಗಾರಿಕೆ ಸಚಿವ ಎಸ್.ಅಂಗಾರ ಹಾಗೂ ಸ್ಥಳೀಯ ಶಾಸಕ ಉಮಾನಾಥ ಕೋಟ್ಯಾನ್ ವಿರುದ್ಧ ಸ್ಥಳೀಯರು ಘೇರಾವ್ ಹಾಕಿ ಪ್ರತಿಭಟಿಸಿದ ಘಟನೆ ಸೋಮವಾರ ನಡೆದಿದೆ. ಈ ಕೈಗಾರಿಕೆ ಸ್ಥಾಪನೆಯ ಸಾಧಕ ಬಾಧಕಗಳ ಕುರಿತು ನಮಗೆ ಸ್ಪಷ್ಟ ಮಾಹಿತಿ ನೀಡದೆ, ನಮ್ಮ ಅಭಿಪ್ರಾಯವನ್ನು ಪಡೆಯದೆ, ಸ್ಥಳ ಪರಿಶಿಲನೆಗೆ ಹೇಗೆ ಬಂದಿದ್ದೀರಿ ಎಂದು ಸ್ಥಳೀಯರು ಸಚಿವ ಮತ್ತು ಶಾಸಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಮಾತನಾಡಿದ ಉಮಾನಾಥ ಕೋಟ್ಯಾನ್, ಇದು ರಾಜ್ಯ ಸರಕಾರದ ಬೃಹತ್ ಕೈಗಾರಿಕೆಯಾಗಿದ್ದು, ಇದನ್ನು ತನ್ನ ಕ್ಷೇತ್ರದಲ್ಲಿ ಸ್ಥಾಪಿಸಲು ಸರಕಾರ ಅನುಮತಿ ನೀಡಿದೆ.

View full article
49 views19:18
ओपन / कमेंट
2021-06-28 19:18:11
Karnataka SSLC Exam 2021 : 'ಪ್ರವೇಶ ಪತ್ರ ಡೌನ್ ಲೋಡ್' ಕುರಿತಂತೆ ವಿದ್ಯಾರ್ಥಿಗಳು, ಶಿಕ್ಷಕರಿಗೆ ಬಹುಮುಖ್ಯ ಮಾಹಿತಿ

ಬೆಂಗಳೂರು : ಎಸ್ ಎಸ್ ಎಲ್ ಸಿ ವಾರ್ಷಿಕ ಪರೀಕ್ಷೆಯ ವಾರ್ಷಿಕ ವೇಳಾಪಟ್ಟಿ ಪ್ರಕಟಗೊಂಡಿದೆ. ಜುಲೈ.19 ಹಾಗೂ 22ರಂದು ಬಹುಆಯ್ಕೆ ಮಾದರಿಯಲ್ಲಿ ಪರೀಕ್ಷೆ ನಡೆಯಲಿದೆ ಎಂಬುದಾಗಿ ದಿನಾಂಕವನ್ನು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್ ಸುರೇಶ್ ಕುಮಾರ್ ಪ್ರಕಟಿಸಿದ್ದಾರೆ. ಇದೇ ಸಂದರ್ಭದಲ್ಲಿ ಜುಲೈನಲ್ಲಿ ನಿಗಧಿಯಾಗಿರುವಂತ ಪರೀಕ್ಷೆಗೆ ಹಾಜರಾಗುವಂತೆ ವಿದ್ಯಾರ್ಥಿಗಳಿಗೆ ಪ್ರವೇಶ ಪತ್ರ ಡೌನ್ ಲೋಡ್ ಮಾಡಿಕೊಳ್ಳುವ ಕುರಿತಂತೆ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಮಾಹಿತಿ ಬಿಡುಗಡೆ ಮಾಡಿದೆ. 'SSLC ವಿದ್ಯಾರ್ಥಿ'ಗಳೇ ಗಮನಿಸಿ : ಹೀಗಿದೆ ವಿಷಯವಾರು 'ಜುಲೈ-2021ರ ವಾರ್ಷಿಕ ಪರೀಕ್ಷೆ'ಯ ವೇಳಾಪಟ್ಟಿ ಈ ಕುರಿತಂತೆ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯ ನಿರ್ದೇಶಕರಾದಂತ ವಿ ಸುಮಂಗಲ ಅವರು, ಸುತ್ತೋಲೆ ಹೊರಡಿಸಿದ್ದು, 2021ನೇ ಜುಲೈ ಮಾಹೆಯಲ್ಲಿ ನಡೆಯುವ ಎಸ್ ಎಸ್ ಎಲ್ ಸಿ ಮುಖ್ಯ ಪರೀಕ್ಷೆಗೆ ಹಾಜರಾಗುತ್ತಿರುವ ವಿದ್ಯಾರ್ಥಿಗಳ ಅಂತಿಮ ಪ್ರವೇಶ ಪತ್ರಗಳನ್ನು ದಿನಾಂಕ 29-06-2021ರಂದು ಮಂಡಳಿಯ ಜಾಲತಾಣದಲ್ಲಿ ಅಪ್ ಲೋಡ್ ಮಾಡಲಾಗುವುದು.

View full article
54 views16:18
ओपन / कमेंट