Get Mystery Box with random crypto!

ಭಾರತ ಭೂಪಟ ತಿರುಚಿದ ವಿವಾದ; ಟ್ವಿಟರ್‌ ವಿರುದ್ಧ 3 ರಾಜ್ಯಗಳಲ್ಲಿ ದೂರು | Kannada News Daily

ಭಾರತ ಭೂಪಟ ತಿರುಚಿದ ವಿವಾದ; ಟ್ವಿಟರ್‌ ವಿರುದ್ಧ 3 ರಾಜ್ಯಗಳಲ್ಲಿ ದೂರು

ನೋಯ್ಡಾ/ನವದೆಹಲಿ: ಸಾಮಾಜಿಕ ಜಾಲತಾಣ ಟ್ವಿಟರ್‌ ವಿರುದ್ಧ ಮಂಗಳವಾರ ವಿವಿಧ ಕಡೆಗಳಲ್ಲಿ ಎಫ್‌ಐಆರ್‌ ದಾಖಲಾಗಿವೆ. ಭಾರತದ ತಿರುಚಿದ ಭೂಪಟ ಪ್ರಕಟಿಸಿದ್ದಕ್ಕಾಗಿ ಉತ್ತರಪ್ರದೇಶ ಹಾಗೂ ಮಧ್ಯಪ್ರದೇಶದಲ್ಲಿ ಎಫ್‌ಐಆರ್‌ ದಾಖಲಾಗಿದ್ದರೆ, ಮಕ್ಕಳ ಅಶ್ಲೀಲ ಚಿತ್ರಗಳನ್ನು ಪ್ರಸಾರ ಮಾಡಿದ ಆರೋಪದ ಮೇಲೆ ದೆಹಲಿ ಪೊಲೀಸರು ಎಫ್‌ಐಆರ್‌ ದಾಖಲಿಸಿದ್ದಾರೆ. ಜಾಲತಾಣದಲ್ಲಿ ಭಾರತದ ಭೂಪಟ ತಪ್ಪಾಗಿ ತೋರಿಸಿದ್ದನ್ನು ಪ್ರಶ್ನಿಸಿ ಬಜರಂಗದಳದ ಪದಾಧಿಕಾರಿಯೊಬ್ಬರು ನೀಡಿದ ದೂರಿನ ಆಧಾರದಲ್ಲಿ ಉತ್ತರ ಪ್ರದೇಶದ ಬುಲಂದ್‌ಶಹರ್‌ ಜಿಲ್ಲೆಯ ಪೊಲೀಸರು ಟ್ವಿಟರ್‌ ಇಂಡಿಯಾ ವಿರುದ್ಧ ಎಫ್‌ಐಆರ್‌ ದಾಖಲಿಸಿದ್ದಾರೆ.

View full article