Get Mystery Box with random crypto!

Kannada News Daily

टेलीग्राम चैनल का लोगो kannadanewsdaily — Kannada News Daily K
टेलीग्राम चैनल का लोगो kannadanewsdaily — Kannada News Daily
चैनल का पता: @kannadanewsdaily
श्रेणियाँ: समाचार
भाषा: हिंदी
ग्राहकों: 209

Ratings & Reviews

2.50

2 reviews

Reviews can be left only by registered users. All reviews are moderated by admins.

5 stars

0

4 stars

0

3 stars

1

2 stars

1

1 stars

0


नवीनतम संदेश 3

2021-07-02 10:18:04
ಕೊರೋನಾ ಹೆಚ್ಚುತ್ತಿರುವ ಆರು ರಾಜ್ಯಗಳಿಗೆ 'ಕೋವಿಡ್ ರಕ್ಷಣಾ ತಂಡ'ಗಳ ರವಾನೆ

ನವದೆಹಲಿ: ದೇಶದಲ್ಲಿ ಕೊರೋನಾ ಎರಡನೇ ಅಲೆ ಇಳಿಕೆಯಾಗುತ್ತಿದೆ, ಆದರೆ ಕೆಲ ರಾಜ್ಯಗಳಲ್ಲಿ ಮಾತ್ರ ಸೋಂಕು ನಿಯಮಿತವಾಗಿ ಉಲ್ಪಣವಾಗುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಈ ಆರು ರಾಜ್ಯಗಳಿಗೆ 'ಕೋವಿಡ್ ರಕ್ಷಣಾ ತಂಡ'ಗಳನ್ನು ರವಾನಿಸಿದೆ. ಸೋಂಕು ಉಲ್ಪಣವಾಗುತ್ತಿರುವ ಕೇರಳ, ಅರುಣಾಚಲ ಪ್ರದೇಶ, ತ್ರಿಪುರ, ಒಡಿಶಾ, ಛತ್ತೀಸ್‌ಗಢ, ಮತ್ತು ಮಣಿಪುರಕ್ಕೆ ಈ ವಿಶೇಷ ತಂಡಗಳನ್ನು ಕೋವಿಡ್-19 ನಿಯಂತ್ರಣ ಮತ್ತು ಧಾರಕ ಕ್ರಮಗಳಿಗಾಗಿ ಕೇಂದ್ರ ಸರ್ಕಾರ ಕಳುಹಿಸಲಾಗುತ್ತಿದೆ.

View full article
23 views07:18
ओपन / कमेंट
2021-07-02 07:18:16
ಜುಲೈ ತಿಂಗಳಿನಲ್ಲಿ ಹೇಗಿರಲಿದೆ ಮುಂಗಾರು? ಎಷ್ಟು ಮಳೆಯಾಗಲಿದೆ?

ನವದೆಹಲಿ, ಜುಲೈ 02: ಕಳೆದ ಒಂದು ವಾರದಿಂದ ದೇಶದಾದ್ಯಂತ ಮುಂಗಾರು ಕ್ಷೀಣಿಸಿದ್ದು, ಜುಲೈ ಮೊದಲ ವಾರದ ನಂತರವಷ್ಟೆ ಮುಂಗಾರು ಮತ್ತೆ ಚುರುಕಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಜುಲೈ ತಿಂಗಳ ಮೊದಲ ವಾರ ಅಷ್ಟು ಉತ್ತಮವಾಗಿ ಮಳೆಯಾಗುವುದಿಲ್ಲ. ಎರಡನೇ ವಾರದಲ್ಲಿ ನೈಋತ್ಯ ಮುಂಗಾರು ಚುರುಕು ಪಡೆಯಲಿದೆ. ಆಗ ದೇಶಾದ್ಯಂತ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ನಿರ್ದೇಶಕ ಮೃತ್ಯುಂಜಯ ಮಹೋಪಾತ್ರ ತಿಳಿಸಿದ್ದಾರೆ. ಮುಂದೆ ಓದಿ... ಜುಲೈನಲ್ಲಿ ಹೇಗಿರಲಿದೆ ಮುಂಗಾರು? ಜುಲೈ ತಿಂಗಳಿನಲ್ಲಿ ಮುಂಗಾರು ಮಳೆ ಸಹಜವಾಗಿರಲಿದೆ. ಜುಲೈನಲ್ಲಿ 94 ರಿಂದ 106% (ದೀರ್ಘಾವಧಿ ಸರಾಸರಿ) ಮಳೆಯಾಗುವ ಸಾಧ್ಯತೆಯಿದೆ ಎಂದು ಇಲಾಖೆ ಅಂದಾಜಿಸಿದೆ. ವಾಯವ್ಯ ಭಾರತದ ಅನೇಕ ಪ್ರದೇಶಗಳಲ್ಲಿ ಮತ್ತು ದಕ್ಷಿಣ ಭಾಗ, ಮಧ್ಯ, ಪೂರ್ವ ಹಾಗೂ ಈಶಾನ್ಯ ಭಾರತದಲ್ಲಿ ಸಾಮಾನ್ಯಕ್ಕಿಂತ ಕಡಿಮೆ ಮಳೆಯಾಗುವ ಸಾಧ್ಯತೆಯಿದೆ ಎಂದು ಮಾಹಿತಿ ನೀಡಿದೆ.

View full article
37 views04:18
ओपन / कमेंट
2021-07-02 07:18:15
ಮಂಗಳಪದವು ಬಳಿ ಕಾಲೇಜು ಬಸ್-ಬೈಕ್ ನಡುವೆ ಭೀಕರ ಅಪಘಾತ:ನಾಲ್ವರಿಗೆ ಗಾಯ, ತಪ್ಪಿದ ಭಾರೀ ಅನಾಹುತ

ವಿಟ್ಲ: ಮೆಡಿಕಲ್ ಕಾಲೇಜಿನ ಬಸ್ ಮತ್ತು ಬೈಕ್ ನಡುವೆ ಭೀಕರ ಅಪಘಾತ ನಡೆದು ಬಸ್ಸಿನಲ್ಲಿದ್ದ ಮಹಿಳಾ ಸಿಬ್ಬಂದಿ ಹಾಗೂ ಬೈಕ್ ಸವಾರ ಗಾಯಗೊಂಡ ಘಟನೆ ಮಂಗಳಪದವು ಅನಂತಾಡಿ ರಸ್ತೆಯ ಸುರುಳಿಮೂಲೆಯಲ್ಲಿ ಶುಕ್ರವಾರ ಬೆಳಗ್ಗೆ ಸಂಭವಿಸಿದೆ. ಮಂಗಳೂರು ಅತ್ತಾವರ ಖಾಸಗಿ ಆಸ್ಪತ್ರೆಗೆ ಸೇರಿದ ಬಸ್ಸಿನಲ್ಲಿ ವೆನ್ಲಾಕ್, ಕೆಎಂಸಿ, ಮತ್ತು ಲೇಡಿಗೋಶನ್ ಆಸ್ಪತ್ರೆಗೆ ಸೇರಿದ ಸಿಬಂದಿಗಳನ್ನು ಕರೆದುಕೊಂಡು ಹೋಗುತ್ತಿದ್ದಾಗ ಎದುರಿನಿಂದ ಬರುತ್ತಿದ್ದ ಬೈಕ್ ಢಿಕ್ಕಿ ಹೊಡೆದಿದೆ. ಪರಿಣಾಮ ಬಸ್ ರಸ್ತೆ ಬದಿಯ ಪ್ರಪಾತದ ಬಳಿ ವಾಲಿನಿಂತಿದೆ. ಬಿಜೆಪಿಯಲ್ಲಿ ಏನೋ ಸಮಸ್ಯೆಯಿದೆ. ಇದು ಆಡಳಿತದ ಮೇಲೂ ದುಷ್ಪರಿಣಾಮ ಬೀರುತ್ತಿದೆ: R.V ದೇಶಪಾಂಡೆ ಘಟನೆಯಲ್ಲಿ ಬಸ್ಸಿನಲ್ಲಿದ್ದ ಮೂವರು ಸ್ಟಾಫ್ ನರ್ಸ್ ಮತ್ತು ಬೈಕ್ ಸವಾರ ಗಾಯಗೊಂಡಿದ್ದಾರೆ.

View full article
32 views04:18
ओपन / कमेंट
2021-07-02 07:18:12
ಒಂದೇ ತಿಂಗಳಲ್ಲಿ ಕೋವಿಡ್ ಆಸ್ಪತ್ರೆ ನಿರ್ಮಾಣ: ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಭೇಟಿ!

ಬೆಂಗಳೂರು, ಜು. 02: ರಾಜ್ಯಕ್ಕೆ ಎರಡು ದಿನಗಳ ಭೇಟಿ ಕೊಟ್ಟಿರುವ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು, ಬೋಯಿಂಗ್ ಸಂಸ್ಥೆಯು 'ಸೆಲ್ಕೋ' ಹಾಗೂ 'ಡಾಕ್ಟರ್ಸ್ ಫಾರ್‌ ಯು' ಸಹಯೋಗದೊಂದಿಗೆ ಯಲಹಂಕದಲ್ಲಿ ನಿರ್ಮಿಸಿರುವ 100 ಹಾಸಿಗೆಗಳ ಅತ್ಯಾಧುನಿಕ ಕೋವಿಡ್ ಕೇರ್‌ ಸ್ಪೆಷಾಲಿಟಿ ಆಸ್ಪತ್ರೆಗೆ ಭೇಟಿ ನೀಡಿದರು. ಯಲಹಂಕದಲ್ಲಿ ಬೋಯಿಂಗ್ ಸಂಸ್ಥೆಯು ಕೊವಿಡ್ ಕೇರ್‌ ಆಸ್ಪತ್ರೆ ನಿರ್ಮಿಸುತ್ತಿರುವ ವಿಷಯವನ್ನು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮೊದಲೇ ತಿಳಿಸಿದ್ದರು. ಮೇ 7ರಂದು ಈ ವಿಷಯವನ್ನು ಟ್ವೀಟ್ ಮಾಡಿದ್ದ ನಿರ್ಮಲಾ ಸೀತಾರಾಮನ್ ಅವರಿಗೆ ಮುಖ್ಯಮಂತ್ರಿ ಬಿ.ಎಸ್‌ ಯಡಿಯೂರಪ್ಪ ಧನ್ಯವಾದ ಹೇಳಿದ್ದರು. ಬೋಯಿಂಗ್ ಸಂಸ್ಥೆಯು 'ಸೆಲ್ಕೋ' ಮತ್ತು 'ಡಾಕ್ಟರ್ಸ್ ಫಾರ್‌ ಯು' ಸಹಯೋಗದೊಂದಿಗೆ ಅತಿ ಕಡಿಮೆ ಅವಧಿಯಲ್ಲಿ ಕೊವಿಡ್ ಕೇರ್‌ ಸ್ಪೆಷಾಲಿಟಿ ಆಸ್ಪತ್ರೆ ಕಟ್ಟಿರುವ ಕುರಿತು ನಿರ್ಮಲಾ ಸೀತಾರಾಮನ್ ಅವರು ಇದೇ ಸಂದರ್ಭದಲ್ಲಿ ಸಂತಸ ವ್ಯಕ್ತಪಡಿಸಿದ್ದಾರೆ.

View full article
27 views04:18
ओपन / कमेंट
2021-07-02 07:18:10
ಹಾನಗಲ್ ಉಪ ಚುನಾವಣೆ; ಮಹತ್ವದ ಹೆಜ್ಜೆ ಇಟ್ಟ ಜೆಡಿಎಸ್

ಬೆಂಗಳೂರು, ಜುಲೈ 01; "ಹಾನಗಲ್ ಉತ್ತರ ಕರ್ನಾಟಕದ ಹೆಬ್ಬಾಗಿಲು. ಉತ್ತರ ಕರ್ನಾಟಕದ ಹೆಬ್ಬಾಗಿಲಿನಲ್ಲಿ ಬಾಗಿಲು ತೆರೆಯುವ ಕೆಲಸವನ್ನು ಜೆಡಿಎಸ್ ಮಾಡುತ್ತಿದೆ" ಎಂದು ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಹೇಳಿದರು. ಗುರುವಾರ ಬೆಂಗಳೂರಿನ ಜೆಪಿ ಭವನದಲ್ಲಿ ಹಾನಗಲ್ ಕ್ಷೇತ್ರದ ಉಪ ಚುನಾವಣೆ ಜೆಡಿಎಸ್ ಅಭ್ಯರ್ಥಿ ನಿಯಾಜ್ ಶೇಕ್ ನೇತೃತ್ವದಲ್ಲಿ 300ಕ್ಕೂ ಹೆಚ್ಚು ಕಾರ್ಯಕರ್ತರು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಗೊಂಡರು. ಎಚ್. ಡಿ. ಕುಮಾರಸ್ವಾಮಿ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಹಾನಗಲ್ ಉಪ ಚುನಾವಣೆ: ಕಾಂಗ್ರೆಸ್‌ಗೆ ಶಾಕ್ ಕೊಟ್ಟ ಮಾಜಿ ಸಿಎಂ ಕುಮಾರಸ್ವಾಮಿ! ಸಮಾರಂಭದಲ್ಲಿ ಮಾತನಾಡಿದ ಕುಮಾರಸ್ವಾಮಿ, "ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಕಾಂಗ್ರೆಸ್ ಕಾರಣ.

View full article
28 views04:18
ओपन / कमेंट
2021-07-02 07:18:07
ಮಾನವೀಯತೆ ಜೊತೆ ಪ್ರಾಮಾಣಿಕತೆ ಮೆರೆದ ಆರೋಗ್ಯ ಕವಚ ಸಿಬ್ಬಂದಿ

ವಿಜಯಪುರ: ಕಾರು ಪಲ್ಟಿಯಾಗಿ ಒಳಗೆ ಸಿಲುಕಿದ್ದ ವ್ಯಕ್ತಿ ರಕ್ಷಣೆ ಮಾಡಿದ ಬಸವನ ಬಾಗೇವಾಡಿ 108 ಆಯಂಬಲೆನ್ಸ್ ಸಿಬ್ಬಂದಿ, ಗಾಯಾಳುಗಳ ಬಳಿ ಇದ್ದ ಲಕ್ಷಾಂತರ ಮೌಲ್ಯದ ಚಿನ್ನಾಭರಣ, ನಗದು ಮರಳಿಸಿ ಪ್ರಾಮಾಣಿಕತೆ ಮೆರೆದಿದ್ದಾರೆ. ಹೂವಿನಹಿಪ್ಪರಗಿ ಬಳಿ ಕಾರು ಪಲ್ಟಿಯಾಗಿ ಗಾಯಾಳುಗಳು ಕಾರಿನಲ್ಲಿ ಸಿಲುಕಿದ್ದರು. ಮಾಹಿತಿ ದೊರೆಯುತ್ತಲೇ 108 ಆಯಂಬಲೆನ್ಸ್ ಸಿಬ್ಬಂದಿ ಗಾಯಾಳುಗಳನ್ನು ರಕ್ಷಿಸಿದ್ದಾರೆ. ಮಂಗಳಪದವು ಬಳಿ ಕಾಲೇಜು ಬಸ್-ಬೈಕ್ ನಡುವೆ ಭೀಕರ ಅಪಘಾತ:ನಾಲ್ವರಿಗೆ ಗಾಯ, ತಪ್ಪಿದ ಭಾರೀ ಅನಾಹುತ ಅಲ್ಲದೇ ಗಾಯಾಳುಗಳ ಬಳಿ ಇದ್ದ ಚಿನ್ನದ ಉಂಗುರ, ಚೈನ್, 1.60 ಲಕ್ಷ ರೂ. ಹಣವನ್ನು ಗಾಯಾಳುಗಳ ಸಂಬಂಧಿಗಳಿಗೆ ಹಸ್ತಾಂತರಿಸಿ ಪ್ರಾಮಾಣಿಕತೆಗೆ ಸಾಕ್ಷಿಯಾಗಿದ್ದಾರೆ.

View full article
28 views04:18
ओपन / कमेंट
2021-07-02 07:18:04
ಮತ್ತೆ ಶುರುವಾಯ್ತು ಏರಿಕೆ: ಪೆಟ್ರೋಲ್, ಡೀಸೆಲ್ ದರ ಗಗನಕ್ಕೆ!

ಸರ್ಕಾರಿ ಸ್ವಾಮ್ಯದ ತೈಲ ಸಂಸ್ಥೆಗಳು ಎರಡು ದಿನಗಳ ವಿರಾಮದ ಬಳಿಕ ಶುಕ್ರವಾರ (ಜುಲೈ 02) ತೈಲ ದರ ಏರಿಕೆ ಮಾಡಿವೆ. ಈ ಮೂಲಕ ದೇಶದ ಬಹುತೇಕ ಎಲ್ಲಾ ನಗರಗಳಲ್ಲಿ ಪೆಟ್ರೋಲ್ ದರ ಮತ್ತಷ್ಟು ಎತ್ತರಕ್ಕೆ ಜಿಗಿದಿದ್ದು, ಡೀಸೆಲ್ ದರದಲ್ಲಿ ವ್ಯತ್ಯಾಸವಾಗಿಲ್ಲ. ನವದೆಹಲಿಯಲ್ಲಿ ಪೆಟ್ರೋಲ್ ದರ ಲೀಟರ್‌ಗೆ 35 ಪೈಸೆ ಏರಿಕೆಗೊಂಡು 99.16 ರೂಪಾಯಿಗೆ ತಲುಪಿದೆ. ಡೀಸೆಲ್ ದರ ಲೀಟರ್‌ಗೆ 89.18 ರೂಪಾಯಿ ಮುಟ್ಟಿದೆ. ದೇಶದ ಪ್ರಮುಖ ನಗರಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರ ಕಳೆದ ನಾಲ್ಕು ದಿನಗಳಲ್ಲಿ ಎಷ್ಟಿದೆ ಎಂಬುದರ ಮಾಹಿತಿ ಈ ಕೆಳಗಿದೆ.

View full article
27 views04:18
ओपन / कमेंट
2021-07-02 07:18:04
ಕುಸಿದಿದ್ದ ಚಿನ್ನದ ಬೆಲೆ ಏರಿಕೆ: ಯಾವ ನಗರದಲ್ಲಿ ಎಷ್ಟು ರೂ. ಜಾಸ್ತಿ ಆಗಿದೆ?

ಭಾರತೀಯ ಮಾರುಕಟ್ಟೆಯಲ್ಲಿ ಹಳದಿ ಲೋಹದ ಬೆಲೆ ಗುರುವಾರ (ಜುಲೈ 01) ಏರಿಕೆಗೊಂಡಿದೆ. ದೆಹಲಿಯಲ್ಲಿ 22 ಕ್ಯಾರೆಟ್ ಚಿನ್ನ 10 ಗ್ರಾಂ 46,150 ರೂಪಾಯಿ ತಲುಪಿದೆ. ಶುದ್ಧ ಚಿನ್ನ 10 ಗ್ರಾಂ 50,150 ರೂಪಾಯಿ ಮುಟ್ಟಿದೆ. ಇದರ ನಡುವೆ ಬೆಳ್ಳಿ ಬೆಲೆಯು ಕೆಜಿಗೆ 1,100 ರೂಪಾಯಿ ಹೆಚ್ಚಾಗಿ 68,700 ರೂಪಾಯಿ ದಾಖಲಾಗಿದೆ. ಭಾರತದ ಪ್ರಮುಖ ನಗರಗಳಲ್ಲಿ ಚಿನ್ನ 10 ಗ್ರಾಂ ಹಾಗೂ ಬೆಳ್ಳಿ ಕೆಜಿಗೆ ಬೆಲೆ ಎಷ್ಟಿದೆ ಹಾಗೂ ಎಷ್ಟು ಕಡಿಮೆ ಆಗಿದೆ ಎಂಬುದರ ಮಾಹಿತಿ ಈ ಕೆಳಗಿದೆ. ರಾಜ್ಯದ ಪ್ರಮುಖ ನಗರಗಳು 22ಕ್ಯಾರೆಟ್ ಚಿನ್ನ ರೂ.

View full article
28 views04:18
ओपन / कमेंट
2021-07-02 01:18:07
ಮತ್ತೆ 'ಬಿಗ್ ಬಾಸ್' ಮನೆಯೊಳಗೆ ಈ ನಟ ? ಈಡೇರಲಿದ್ಯಾ ಅಭಿಮಾನಿಗಳ ಆಸೆ..!

ಸಿನಿಮಾ ಡೆಸ್ಕ್ : ಕೋವಿಡ್ ಹಿನ್ನೆಲೆ ಅರ್ಧಕ್ಕೆ ನಿಂತಿದ್ದ ಕಿಚ್ಚ ಸುದೀಪ್ ನಿರೂಪಣೆಯ ಅತಿ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 8 ಮತ್ತೆ ಆರಂಭವಾಗುತ್ತಿದೆ. ಬಿಗ್ ಬಾಸ್ ಸೀಸನ್ 8 ಜೂನ್ 21 ರಿಂದ ಮತ್ತೆ ಪ್ರಸಾರವಾಗಲಿದೆ. ಕೊರೊನಾದಿಂದ ಅರ್ಧಕ್ಕೆ ನಿಂತಿರುವ ಬಿಗ್‍ಬಾಸ್ ರಿಯಾಲಿಟಿ ಶೋ ಜೂನ್ 21 ರಿಂದ ಮತ್ತೆ ಪ್ರಾರಂಭವಾಗುತ್ತಿದೆ. ಸ್ಪರ್ಧಿಗಳು ಈಗಾಗಲೇ ಮತ್ತೆ ಬಿಗ್ ಮನೆಯ ಒಳಗಡೆ ಬರಲು ಕಾತುರದಿಂದ ಕಾಯುತ್ತಿದ್ದಾರೆ. ಬಿಗ್​ ಬಾಸ್​ ಎರಡನೇ ಇನ್ನಿಂಗ್ಸ್​ನಲ್ಲಿ ಅರವಿಂದ್​​, ದಿವ್ಯಾ ಉರುಡುಗ, ಮಂಜು ಪಾವಗಡ, ದಿವ್ಯಾ ಸುರೇಶ್​, ನಿಧಿ ಸುಬ್ಬಯ್ಯ, ಶುಭಾ ಪುಂಜಾ, ಪ್ರಶಂತ್​ ಸಂಬರಗಿ, ವೈಷ್ಣವಿ, ಪ್ರಿಯಾಂಕಾ, ಚಕ್ರವರ್ತಿ ಚಂದ್ರಚೂಡ್, ರಘು, ಶಮಂತ್​ ಬಿಗ್​ ಬಾಸ್​ ಮನೆಯೊಳಕ್ಕೆ ಎರಡನೇ ಬಾರಿ ಆಗಮಿಸುತ್ತಿದ್ದಾರೆ.

View full article
50 views22:18
ओपन / कमेंट
2021-07-01 22:18:11
ನಂಜನಗೂಡಿನ ಬೈಪಾಸ್ ರಸ್ತೆಯಲ್ಲಿ ಹಂದಿಗಳ ಸವಾರಿ!

ಮೈಸೂರು, ಜುಲೈ 1: ಇದುವರೆಗೆ ಬೀದಿನಾಯಿ, ಬೀದಿ ದನಗಳಿಂದ ತೊಂದರೆ ಅನುಭವಿಸುತ್ತಿದ್ದ ನಂಜನಗೂಡು ಜನ ಇದೀಗ ಹಂದಿಗಳ ಕಾಟದಿಂದ ಒದ್ದಾಡುವಂತಾಗಿದೆ. ಎಲ್ಲೆಂದರಲ್ಲಿ ಅಡ್ಡಾಡುವ ಹಂದಿಗಳಿಂದ ತಪ್ಪಿಸಿಕೊಂಡು ಸಂಚರಿಸುವುದೇ ವಾಹನ ಸವಾರರಿಗೆ ಸವಾಲ್ ಆಗಿ ಪರಿಣಮಿಸಿದೆ. ಈಗಾಗಲೇ ನಂಜನಗೂಡು ಪಟ್ಟಣದ ಜನ ಬೀದಿ ನಾಯಿ, ಬೀದಿ ದನ, ಕುದುರೆಗಳ ಕಾಟದಿಂದ ಕಂಗಾಲಾಗಿದ್ದಾರೆ. ಈ ಹಿಂದೆ ಕುದುರೆಗಳು ಸಾರ್ವಜನಿಕರ ಮೇಲೆ ದಾಳಿ ಮಾಡಿದ ಘಟನೆಗಳು ನಡೆದಿವೆ. ಇದೆಲ್ಲವೂ ಹಸಿರಾಗಿರುವಾಗಲೇ ಹಂದಿಗಳ ಕಾಟ ಆರಂಭವಾಗಿದೆ. ಹಂದಿಗಳನ್ನು ಸಾಕುವವರು ಅವುಗಳನ್ನು ಬೀದಿಗೆ ಬಿಡುತ್ತಿರುವುದರಿಂದ ಅವು ರಾಜಾರೋಷವಾಗಿ ಪಟ್ಟಣದಲ್ಲಿ ಅಡ್ಡಾದಿಡ್ಡಿಯಾಗಿ ಓಡಾಡುತ್ತಿದ್ದು, ಅವುಗಳಿಂದ ತಪ್ಪಿಸಿಕೊಂಡು ಸಂಚರಿಸುವುದೇ ಒಂದು ರೀತಿಯ ಸರ್ಕಸ್ ಎಂದರೆ ತಪ್ಪಾಗಲಾರದು. ಮೈಸೂರು ವಿವಿಯಲ್ಲಿ ತೃತೀಯ ಲಿಂಗಿಗಳಿಗೆ ಸೀಟು ಮೀಸಲು ಬೈಪಾಸ್ ರಸ್ತೆಯಲ್ಲಿ ಹಂದಿಗಳ ಕಾಟ ಇನ್ನು ನಂಜನಗೂಡು ಹಾಗೂ ಚಾಮರಾಜನಗರ ಬೈಪಾಸ್ ರಸ್ತೆಯು ಸದಾ ವಾಹನಗಳ ದಟ್ಟಣೆಯಿಂದ ಕೂಡಿರುತ್ತದೆ.

View full article
47 views19:18
ओपन / कमेंट