Get Mystery Box with random crypto!

🕯ಬದುಕಲು ಕಲಿಯಿರಿ🕯

टेलीग्राम चैनल का लोगो badukalukaliyiri — 🕯ಬದುಕಲು ಕಲಿಯಿರಿ🕯
टेलीग्राम चैनल का लोगो badukalukaliyiri — 🕯ಬದುಕಲು ಕಲಿಯಿರಿ🕯
चैनल का पता: @badukalukaliyiri
श्रेणियाँ: अवर्गीकृत
भाषा: हिंदी
ग्राहकों: 24.54K
चैनल से विवरण

ಸಮುದ್ರದ ಅಲೆ ನನಗೆ ಆದರ್ಶ.
ಎದ್ದು ಎದ್ದು ಬೀಳುತ್ತಿರುವುದಕ್ಕಲ್ಲ.
ಬಿದ್ದರೂ ಏಳುತ್ತಿರುವುದಕ್ಕೆ.
ಬೀಳುವುದನ್ನು ಕಂಡ ನೀವು
ಸ್ವಲ್ವ ಇದ್ದು ಏಳುವುದನ್ನು ಕೂಡ ನೋಡಿ ಹೋಗಿ,
ಚೆನ್ನಾಗಿರುತ್ತದೆ💥💪💥
ಹಿಂದೂಸ್ಥಾನವು ಎಂದೂ ಮರೆಯದ
ಭಾರತ ರತ್ನವು ನೀನಾಗು...💪
ನಿಮ್ಮ ಮನದನಿಯ ಸಾರಥಿ!🤗
@LovingCHALLENGES

Ratings & Reviews

4.50

2 reviews

Reviews can be left only by registered users. All reviews are moderated by admins.

5 stars

1

4 stars

1

3 stars

0

2 stars

0

1 stars

0


नवीनतम संदेश 8

2023-04-25 17:03:03 ಒಂದು ಸಲ ಜಪಾನಿನ ಸಮುದ್ರದಲ್ಲಿ ಭಾರೀ ಮತ್ಸ್ಯ ಕ್ಷ್ಯಾಮ ತಲೆದೋರಿತು. ಮೀನು ಜಪಾನಿಯರ ಅತ್ಯಂತ ಪ್ರೀತಿಯ ಆಹಾರವಾದುದರಿಂದ ದೂರದ ಸಮುದ್ರಕ್ಕೆ ಹೋಗಿ ಮೀನು ಹಿಡಿದು ತರುವುದೆಂದು ನಿರ್ಧರಿಸಲಾಯಿತು. ಹಾಗೆ ದೂರದ ಸಮುದ್ರದೊಳಕ್ಕೆ ಹೋಗಬೇಕೆಂದರೆ ಸಣ್ಣ ಪುಟ್ಟ ದೋಣಿಗಳಲ್ಲಿ ಹೋಗಲಾಗುವುದಿಲ್ಲ. ಈ ರೀತಿ ಹೋಗುವುದು ಆರ್ಥಿಕವಾಗಿಯೂ ಲಾಭದಾಯಕವಲ್ಲ, ಸುರಕ್ಷತೆಯ ದೃಷ್ಟಿಯಿಂದ ಕ್ಷೇಮವೂ ಅಲ್ಲ.

ಅಂತಹ ಕಾರ್ಯಗಳಿಗೆ ದೊಡ್ಡ ದೋಣಿಗಳೆ ಬೇಕಾಗುತ್ತವೆ. ಅಂತೆಯೇ ದೊಡ್ಡ ಮೀನುಗಾರಿಕಾ ಬೋಟ್ ಗಳನ್ನು ಕೊಳ್ಳಲಾಯಿತು. ಮೀನುಗಾರಿಕೆಗೆ ಹೊರಟ ದೋಣಿಗಳು ದಿನಗಟ್ಟಲೆ ತೀರಕ್ಕೆ ಬರುತ್ತಿರಲಿಲ್ಲ. ಅವು ವಾಪಸ್ಸು ಬರಲು ಸಮಯ ತೆಗೆದುಕೊಳ್ಳುತ್ತಿದ್ದರಿಂದ ಬಹುತೇಕ ಮೀನುಗಳು ತಮ್ಮ ತಾಜಾತನವನ್ನು ಕಳೆದುಕೊಂಡು, ಮೆದುವಾಗಿ ಕೊಳೆಯಲಾರಂಭಿಸಿದವು. ಅಂತಹ ಮೀನುಗಳನ್ನು ಜಪಾನಿಯರು ಸುತಾರಾಂ ಇಷ್ಟಪಡಲಿಲ್ಲ. ಆದ್ದರಿಂದ ಮೀನುಗಾರಿಕಾ ಕಂಪನಿಗಳು ಹಡಗುಗಳಲ್ಲಿ ಡೀಪ್ ಫ್ರೀಜರ್ ಗಳನ್ನು ಅಳವಡಿಸಿದವು. ಮೀನು ಹಿಡಿಯಲು ಸಾಗರಕ್ಕೆ ತೆರಳಿದ ಹಡಗುಗಳು ವಾರಗಟ್ಟಲೆ ತೀರಕ್ಕೆ ತಿರುಗಿ ಬಾರದೆ ಹೋದರೂ ಹಿಡಿದಿದ್ದ ಮೀನುಗಳು ಡೀಪ್ ಫ್ರೀಜರ್ ಗಳಲ್ಲಿ ಸುರಕ್ಷಿತವಾಗಿ ಕೊಳೆಯದೆ ಉಳಿಯುತ್ತಿದ್ದವು.
ಆದರೂ ಜಪಾನಿಯರು ಹಾಗೆ ಶೈತ್ಯಾಗಾರದಲ್ಲಿ ಸಂಗ್ರಹಿಸಿದ ಮೀನಿನಲ್ಲಿರುವ ವ್ಯತ್ಯಾಸವನ್ನು ಅರಿಯಬಲ್ಲವರಾಗಿದ್ದರು ಮತ್ತು ತಾಜಾ ಮೀನಿನ ರುಚಿಯ ಮುಂದೆ ಈ ಶೀತಲ ಮೀನು ಸಪ್ಪೆ ಅನಿಸುತ್ತಿತ್ತು. ಆದ್ದರಿಂದ ಈ ಮೀನಿಗೆ ಬೇಡಿಕೆ ಕಮ್ಮಿಯಾಯಿತು.

ಜಪಾನೀ ಜನರ ತಾಜಾ ಮೀನಿನ ಮೋಹ ಕಂಡು ಮೀನುಗಾರಿಕಾ ಕಂಪನಿಗಳು ಯೋಚನೆಗೆ ಬಿದ್ದವು. ಕೊನೆಗೆ ಬೃಹತ್ ಹಡಗುಗಳನ್ನು ಕೊಂಡುಕೊಳ್ಳಲಾಯ್ತು. ಮೀನುಗಾರಿಕಾ ಕಂಪನಿಗಳು ಬೃಹತ್ ಹಡಗುಗಳಲ್ಲಿ ಡೀಪ್ ಫ್ರೀಜರ್ ಗಳ ಬದಲಿಗೆ ಕೃತಕ ಮೀನು ಕೊಳಗಳನ್ನು ನಿರ್ಮಿಸಿದರು. ಮೀನುಗಳ ಕೊಳಗಳಿಗೆ ಸಾಗರದ ನೀರನ್ನು ಹಾಯಿಸಿ ಒಂದು ಪುಟಾಣಿ ಕೃತಕ ಸಾಗರವೇ ಹಡಗಿನೊಳಗೆ ನಿರ್ಮಾಣ ಮಾಡಿದರು. ತಾವು ಹಿಡಿದ ಮೀನುಗಳನ್ನು ತಾತ್ಕಾಲಿಕವಾಗಿ ಈ ಈಜು ಕೊಳಗಳಲ್ಲಿ ಈಜಲು ಬಿಟ್ಟು ಹಡಗು ತೀರ ತಲುಪಿದ ನಂತರ ಅವುಗಳನ್ನು ಅವಶ್ಯಕತೆಗಳ ಅನುಸಾರವಾಗಿ ಹಿಡಿದು ಸರಬರಾಜು ಮಾಡಲಾರಂಭಿಸಿದರು.
ದುರದೃಷ್ಟವಶಾತ್ ಬಾಯಿ ಚಪಲದ ಜಪಾನಿ ಜನರು ಅವುಗಳ ರುಚಿಯನ್ನು ಕೂಡಾ ಇಷ್ಟಪಡಲಿಲ್ಲ. ತಾಜಾ ಮೀನುಗಳಿಗಿರುವ ರುಚಿಗಿಂತ ಈ ಕೃತಕ ಕೊಳಗಳಲ್ಲಿ ಸಂಗ್ರಹಿಸಿದ ಮೀನುಗಳು ಭಿನ್ನವಾಗಿದ್ದವು. ಅಂತಹಾ ಸೂಕ್ಷ್ಮವ್ಯತ್ಯಾಸವನ್ನು ಕೂಡಾ ಜಪಾನಿ ಜನತೆ ಗುರುತಿಸಬಲ್ಲವರಾಗಿದ್ದರು.
ಮೀನಿನ ರುಚಿಯ ವಿಷಯದಲ್ಲಿ ಯಾವುದೇ ರಾಜಿಗೆ ಸಿದ್ಧವಿಲ್ಲದ ಜಪಾನಿಯರು ರುಚಿ ಹೀನ ಮೀನು ಸೇವಿಸುವುದನ್ನೇ ನಿಲ್ಲಿಸಿದರು. ಅವರಿಗೆ ಬೇಕಾಗಿದ್ದದ್ದು ಹಚ್ಚ ಹಸಿ ಹಸಿ ತಾಜಾ ಮೀನುಗಳು. ಮೀನುಗಳಿಗೆ ದಿಢೀರನೆ ಬೇಡಿಕೆ ಕುಸಿಯಿತು. ಈಗಾಗಲೇ ಮಾರುಕಟ್ಟೆಗೆ ಬಂದಿದ್ದ ಮೀನುಗಳು ವ್ಯಾಪಾರವಾಗದೇ ಉಳಿದುಹೋದವು.
ಆವಾಗಲೇ ಬೃಹತ್ ಮೊತ್ತವನ್ನು ಹಡಗು ಕಟ್ಟಲು, ಹಡಗು ಕೊಳ್ಳಲು, ಡೀಪ್ ಫ್ರೀಜರ್ ಗಳನ್ನು ಅಳವಡಿಸಲು ಮತ್ತು ಮೀನುಗಳ ಕೊಳವನ್ನು ನಿರ್ಮಿಸಲು ತೊಡಗಿಸಲಾಗಿತ್ತು. ಕಂಪನಿಯವರು ತಲೆಗೆ ಕೈ ಹಚ್ಚಿ ಕುಳಿತುಕೊಂಡರು.

ಈಗ ಹೇಳಿ, ಜಪಾನಿಯರ ಮೀನಿನ ಬಯಕೆಯನ್ನು ಪೂರೈಸುವುದು ಹೇಗೆ ಅವರ ಬಾಯಿ ಚಪಲವನ್ನು ನೀಗಿಸುವುದು ಹೇಗೆ?

ಇದು ದೊಡ್ಡ ಟಾಸ್ಕ್ ಆಗಿತ್ತು. ಕಸ್ಟಮರ್ ಸರ್ವೀಸಿಗೆ ಹೆಸರಾದ ಜಪಾನೀಯರಿಗೆ ಇದು ನಿಜಕ್ಕೂಒಂದು ನಿಜವಾದ ಸವಾಲಾಗಿತ್ತು. ಈ ಸವಾಲನ್ನು ಜಪಾನೀಯರು ಗೆದ್ದರಾ, ಗೆದ್ದರೆ ಹೇಗೆ?

ಜಪಾನೀಯರು ಹಡಗಿನಲ್ಲಿದ್ದ ಈಜು ಕೊಳದೊಳಕ್ಕೆ ಒಂದು ಚಿಕ್ಕ ಶಾರ್ಕ್ ಮೀನನ್ನು ತಂದು ಬಿಟ್ಟರು. ಇಲ್ಲಿಯತನಕ ಕೇವಲ ಚಿಕ್ಕಪುಟ್ಟ ಮೀನುಗಳೇ ಇದ್ದ ಹಡಗಿನ ಕೊಳದಲ್ಲಿ, ತಮ್ಮ ಜೀವಕ್ಕೆ ತ್ರೆಟ್ ( ಬೆದರಿಕೆ) ಏನೂ ಇಲ್ಲದ ಕಾರಣದಿಂದ ಎಲ್ಲ ಮೀನುಗಳು ಕೂಡ ತಮ್ಮ ಓಡಾಟವನ್ನು ಕಡಿಮೆಮಾಡಿಕೊಂಡಿದ್ದವು. ಎಂದಿನ ಸಮುದ್ರ ಜೀವನದ ಜೀವಂತಿಕೆಯಿಲ್ಲದೆ, ಲೇಜಿಯಾಗಿ ಮೀನುಗಳು ಇರಲಾರಂಭಿಸಿದ್ದು ಅವುಗಳ ರುಚಿಹೀನತೆಗೆ ಕಾರಣವಾಗಿತ್ತು. ಯಾವಾಗಾ ತಮ್ಮನ್ನುಕೊಂದು ತಿನ್ನಬಲ್ಲ ವೈರಿ ಶಾರ್ಕ್ ಕೊಳದೊಳಕ್ಕೆ ಬಂತೋ, ಆಗ ಎಲ್ಲ ಮೀನುಗಳೂ ಅಲರ್ಟ್ ಆದವು. ಹೊಸ ಜೀವ ಕಳೆ ಅವುಗಳಲ್ಲಿ ಗೋಚರಿಸಿತು. ಹಡಗಿನ ಕೊಳವು ಒಂದು ಜೀವಂತ ಸಮುದ್ರವಾಗಿ ಮೀನುಗಳು ತಾಜಾ ಮತ್ತು ರುಚಿಕರವಾಗಿರಲು ಸಾಧ್ಯವಾಯಿತು.

Have you realized that some of us are also living in a pond but most of the time tired and dull....?

Basically in our lives, sharks are new challenges to keep us active.

If you are steadily conquering
challenges, you are happy.

Your challenges keep you energized.

Don’t create Success and revel in it in a state of inertia.

You have the resources, skills and abilities to make a difference.

Put a shark in your tank and see how far you can really go....
5.6K viewsBe A Warrior, edited  14:03
ओपन / कमेंट
2023-04-25 14:20:34
5.7K viewsBe A Warrior, 11:20
ओपन / कमेंट
2023-04-25 01:32:00
6.3K viewsBe A Warrior, 22:32
ओपन / कमेंट
2023-04-25 01:31:00
6.3K viewsBe A Warrior, 22:31
ओपन / कमेंट
2023-04-24 19:05:11
ನಾವು ಮಾಡಿದ ತಪ್ಪು ಎನ್ನುವುದು ಜೀವನದ ಒಂದು ಪುಟ ಮಾತ್ರ. ಆದರೆ ಸಂಬಂಧ ಎನ್ನುವುದು ಪೂರ್ತಿ ಪುಸ್ತಕವಿದ್ದಂತೆ.
ಒಂದು ಪುಟಕ್ಕೋಸ್ಕರ ಇಡೀ ಪುಸ್ತಕವನ್ನು ಕಳೆದುಕೊಳ್ಳಬಾರದು.
ಯಾವತ್ತೂ ಸಂಬಂಧಕ್ಕೆ ಬೆಲೆ ಕೊಡಬೇಕು.
6.5K viewsBe A Warrior, edited  16:05
ओपन / कमेंट
2023-04-24 09:20:30
Old man has 8 hair on his head.
He went to Barber shop.
Barber in anger asked: shall i cut or count ?
Old man smiled and said: "Colour it!"

LIFE is to enjoy with whatever you have with you,
Keep Smiling Always........
6.8K viewsBe A Warrior, edited  06:20
ओपन / कमेंट
2023-04-24 01:32:00
ನೀವು ಸಹನೆಯನ್ನು ಕಳೆದುಕೊಂಡಿರಿ ಅಂದ್ರೆ ನಿಮ್ಮ ಮುಂದಿನ ಹೋರಾಟ ಅಥವಾ ಸಮರವನ್ನು ಸೋತಿರಿ ಎಂದೇ ಅರ್ಥ. ಬದುಕಿನಲ್ಲಿ ಎಲ್ಲವನ್ನೂ ಕಳೆದುಕೊಂಡು, ಸಹನೆಯೊಂದನ್ನು ಇಟ್ಟುಕೊಂಡಿದ್ದರೆ, ನೀವು ಇನ್ನೂ ಸ್ಪರ್ಧೆಯಲ್ಲಿ ಇದ್ದೀರಿ ಎಂದರ್ಥ.

ಸಹನೆ ಯಾವತ್ತೂ ನಿಮ್ಮನ್ನು ಕಾಯುತ್ತದೆ, ಕಾಪಾಡುತ್ತದೆ.
189 viewsBe A Warrior, edited  22:32
ओपन / कमेंट
2023-04-24 01:31:00
ನಮ್ಮ ನಾಳೆಗಳನ್ನು ಸುಂದರವಾಗಿ ರೂಪಿಸಿಕೊಳ್ಳಲು 'ಇಂದಿನ ದಿನ' ಒಳ್ಳೆಯ ಅವಕಾಶ!
196 viewsBe A Warrior, 22:31
ओपन / कमेंट
2023-04-23 18:06:47
2.9K viewsBe A Warrior, 15:06
ओपन / कमेंट
2023-04-23 06:05:32
4.9K viewsBe A Warrior, edited  03:05
ओपन / कमेंट