Get Mystery Box with random crypto!

Practice Brings PERFECTION

टेलीग्राम चैनल का लोगो practicebringsperfection — Practice Brings PERFECTION P
टेलीग्राम चैनल का लोगो practicebringsperfection — Practice Brings PERFECTION
चैनल का पता: @practicebringsperfection
श्रेणियाँ: शिक्षा
भाषा: हिंदी
ग्राहकों: 25.78K
चैनल से विवरण

💜100% Free Service for Poor Students 💜
ಇದು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ
ಸಿದ್ಧಗೊಳ್ಳುವ ಸ್ಪರ್ಧಾರ್ಥಿಗಿದು
"ಸ್ಪರ್ಧಾ ವ್ಯಾಯಾಮ ಶಾಲೆ"
ಆ ವ್ಯಾಯಾಮಶಾಲೆಯಿಂದ
ದೇಹದ ಅಂಗಾಂಗಗಳು ಬಲಿಷ್ಠ,
ಈ ವ್ಯಾಯಾಮಶಾಲೆಯಿಂದ
ಎಲ್ಲಾ ವಿಷಯಗಳಲ್ಲಿ ನೀನಾಗುವೆ ಬಹುಬಲಿಷ್ಠ.
For Doubts👇
@LovingCHALLENGES

Ratings & Reviews

4.00

3 reviews

Reviews can be left only by registered users. All reviews are moderated by admins.

5 stars

1

4 stars

1

3 stars

1

2 stars

0

1 stars

0


नवीनतम संदेश 9

2023-05-03 11:12:25 ᴀɴꜱ ᴀɢᴀɪɴ ᴇʟᴇᴄᴛᴇᴅ ᴀꜱ ʀᴀᴊyᴀ ꜱᴀʙʜᴀ ʟᴇᴀᴅᴇʀ ꜰʀᴏᴍ ᴍᴜᴍʙᴀɪ.
213 viewsꜱᴜʀᴇꜱʜ ɢᴜʀɪᴋᴀʀ, 08:12
ओपन / कमेंट
2023-05-03 07:38:02 " ಉತ್ತಮ ಓದಿಗೆ ಒಂದು ಉತ್ತಮ ಹವ್ಯಾಸ "

ಮಾಡುವ ಕೆಲಸದಲ್ಲಿ ಯಶಸ್ಸಿನ ಹಾದಿಯಲ್ಲಿ ತೆರಳುತ್ತಿದ್ದೇವೆ ಎಂಬುವುದನ್ನು ಅರಿಯಲು ಮಾದರಿ ಪರೀಕ್ಷೆ ಪ್ರತಿ ಕೆಲಸದಲ್ಲೂ ಇರುತ್ತದೆ, ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕೂಡಾ ನೀವು ತಯಾರಾಗುವ ಪರೀಕ್ಷೆಯ ಕುರಿತಂತೆ ಮಾದರಿ ಪರೀಕ್ಷೆಗಳು ಮುಖ್ಯವಾಗಿರುತ್ತವೆ.

ɴᴏᴛᴇ - ᴛᴀᴋᴇ ᴍᴏᴅᴇʟ ᴇxᴀᴍꜱ ᴡᴇᴇᴋʟy ᴏʀ 15 ᴅᴀyꜱ ᴏɴᴄᴇ, ɪꜰ yᴏᴜ ꜱᴄᴏʀᴇ ʟᴇꜱꜱ ᴛʜᴇɴ 70% ᴏꜰ ᴍᴀʀᴋ'ꜱ , ɪɴᴄʀᴇᴀꜱᴇ yᴏᴜʀ ᴇꜰꜰɪᴄɪᴇɴᴄy
1.1K viewsꜱᴜʀᴇꜱʜ ɢᴜʀɪᴋᴀʀ, edited  04:38
ओपन / कमेंट
2023-04-29 08:51:56
Hate Speeches
Click for Kannada
2.3K viewsBe A Warrior, edited  05:51
ओपन / कमेंट
2023-04-29 01:32:00
2.9K viewsBe A Warrior, 22:32
ओपन / कमेंट
2023-04-28 21:44:54 What is fiber broadband and how does it work?
https://indianexpress.com/article/technology/tech-news-technology/tech-indepth-how-fiber-broadband-works-7935999/
2.7K viewsTHEJAS , edited  18:44
ओपन / कमेंट
2023-04-28 20:32:46 ಪ್ರಮುಖ ಮನೆತನಗಳು ಮತ್ತು ಕಲೆ, ವಾಸ್ತುಶಿಲ್ಪ

ಬಾದಾಮಿ ಚಾಲುಕ್ಯರ ವಾಸ್ತುಶಿಲ್ಪ

NOTE :
ಬಾದಾಮಿ ಚಾಲುಕ್ಯರು  ವೇಸರ ಶೈಲಿಯ ಸ್ಮಾರಕಗಳನ್ನು ನಿರ್ಮಿಸಿದ್ದಾರೆ. ವೇಸರ ಶೈಲಿ ಎಂದರೆ ದಕ್ಷಿಣ ಭಾರತದ ದ್ರಾವಿಡ ಶೈಲಿ ಮತ್ತು ಉತ್ತರ ಭಾರತದ ನಾಗರಶೈಲಿಯ ಮಿಶ್ರಣವಾಗಿದೆ.

ಬಾದಾಮಿ ಚಾಲುಕ್ಯರ ಕಲೆ ಮತ್ತು ವಾಸ್ತುಶಿಲ್ಪ ಕಂಡುಬರುವ ಸ್ಥಳಗಳು

ಐಹೊಳೆ

ಫರ್ಗ್ಯುಸನ್ ರವರು ಐಹೊಳೆಗೆ ವಾಸ್ತುಶಿಲ್ಪದ ಪ್ರಯೋಗಶಾಲೆ ಎಂದು ಕರೆದಿದ್ದಾರೆ.

ಪರ್ಶಿಬ್ರೌನರವರು ಈ ನಗರಕ್ಕೆ  ದೇವಾಲಯಗಳ ತೊಟ್ಟಿಲು ಎಂದು ವರ್ಣಿಸಿದ್ದಾರೆ.

ದೇವಾಲಯಗಳು : ಮೇಗುತಿ, ಲಾಡ್ ಖಾನ್, ಹುಚ್ಚ ಮಲ್ಲಿ ಮತ್ತು ದುರ್ಗಾ ದೇವಾಲಯಗಳು ಕಂಡುಬರುತ್ತವೆ.

ಬಾದಾಮಿ (ವಾತಾಪಿ )

ಪಟ್ಟದಕಲ್ಲು (ಕಿಸುವೊಳಲ್)

ಶಾತವಾಹನರ  ವಾಸ್ತುಶಿಲ್ಪ

ಶಾತವಾಹನರು ಲಲಿತಕಲೆಗಳ ಆರಾಧಕರಾಗಿದ್ದರು.

ಅವರು ಬೌದ್ಧ ವಾಸ್ತುಶಿಲ್ಪವನ್ನು ಪೋಷಿಸಿದರು.

ಚೈತ್ಯಾಲಯಗಳು, ವಿಹಾರಗಳು ಮತ್ತು ಸ್ತುಪಗಳೆಂಬ  3 ವಿಧದ ಸ್ಮಾರಕಗಳನ್ನು ನಿರ್ಮಿಸಿದರು.

ಶಾತವಾಹನರ ಕಲೆ ಮತ್ತು ವಾಸ್ತುಶಿಲ್ಪ ಕಂಡುಬರುವ ಸ್ಥಳಗಳು.

ಕಾರ್ಲೆ      ನಾಗಾರ್ಜುನಕೊಂಡ
ಅಜಂತ    ನಾಸಿಕ್
ಕೊಂಡಾನೆ ಬ್ರೋಚ್
ಜುನ್ನಾರ್   ಪೈತಾನ್
ಕನ್ಹೆರಿ        ತಗಾರ

ಕದಂಬರ ವಾಸ್ತುಶಿಲ್ಪ

ಹಲಸಿಯ ಮೃಗೇಶವರ್ಮನು ಕಟ್ಟಿಸಿದ ಜೈನ ಬಸದಿ ಅವರ ಆರಂಭ ರಚನೆಯಾಗಿದೆ.

ದಕ್ಷಿಣ ಭಾರತದಲ್ಲಿ ಮೊಟ್ಟ ಮೊದಲ ಪ್ರಾಚೀನ ದೇವಾಲಯಗಳ ಕಲಾಕೃತಿ ತಾಳಗುಂದದ ಪ್ರಾಣೇಶ್ವರ ದೇವಾಲಯ ಎಂದು ಡಾ. ಎಂ ಹೆಚ್ ಕೃಷ್ಣರವರು ಹೇಳಿದ್ದಾರೆ.

ಕದಂಬರ ಕಲೆ ಮತ್ತು ವಾಸ್ತುಶಿಲ್ಪ ಕಂಡುಬರುವ ಸ್ಥಳಗಳು ಮತ್ತು ದೇವಾಲಯಗಳು.

ಹಲಸಿ ಕಲ್ಲೇಶ್ವರ ದೇವಾಲಯ

ಬನವಾಸಿ ಮಧುಕೇಶ್ವರ ದೇವಾಲಯ

ಗೋಕರ್ಣ ದ್ವಿಬಾಹು ಗಣೇಶ

ಜಂಬೇಹಳ್ಳಿ ದುರ್ಗಾ ವಿಗ್ರಹಗಳು

ಗುಡ್ನಾಪುರ ಮನ್ಮಥ ದೇವಾಲಯ

ಗಂಗರ ವಾಸ್ತುಶಿಲ್ಪ

ಗಂಗರ ಕಾಲದ ಸ್ಮಾರಕಗಳಲ್ಲಿ ಸೂರ್ಯ ಉದಯಿಸುತ್ತಿರುವ ಚಿತ್ರ ಸಾಮಾನ್ಯವಾಗಿ ಕಂಡುಬಂದಿದೆ.

ಗಂಗರ ಕಲೆ ಮತ್ತು ವಾಸ್ತುಶಿಲ್ಪ ಕಂಡುಬರುವ ಸ್ಥಳಗಳು ಮತ್ತು ದೇವಾಲಯಗಳು.

ತಲಕಾಡು ಮರುಳೇಶ್ವರ ಪಂಚಲಿಂಗೇಶ್ವರ ಮತ್ತು ಪಾತಾಳೇಶ್ವರ ದೇವಾಲಯ

ಮಣ್ಣೆ ಕಪಿಲೇಶ್ವರ ದೇವಾಲಯ

ಕೋಲಾರ ಕೋಲಾರಮ್ಮನ ದೇವಾಲಯ

ನರಸಮಂಗಲ ರಾಮಲಿಂಗೇಶ್ವರ ದೇವಾಲಯ

ಶ್ರವಣಬೆಳಗೊಳ ಗೊಮ್ಮಟೇಶ್ವರನ ವಿಗ್ರಹ, ಬ್ರಹ್ಮದೇವನ ಸ್ತಂಭ ಮತ್ತು ಮಾನಸ್ತಂಭಗಳು.

ಹೊಯ್ಸಳರ ವಾಸ್ತುಶಿಲ್ಪ

ಇವರ ಕಾಲದ ದೇವಾಲಯಗಳು ನಕ್ಷತ್ರಾಕಾರದಲ್ಲಿ ನಿರ್ಮಾಣವಾಗಿವೆ.

ಇವರು ಹೊಯ್ಸಳ ಶೈಲಿಯ ಸ್ಮಾರಕಗಳನ್ನು ನಿರ್ಮಿಸಿದ್ದಾರೆ.

ಹೊಯ್ಸಳರ ಕಲೆ ಮತ್ತು ವಾಸ್ತುಶಿಲ್ಪ ಕಂಡುಬರುವ ಸ್ಥಳಗಳು ಮತ್ತು ದೇವಾಲಯಗಳು.

ಬೇಲೂರು ಚೆನ್ನಕೇಶವ ದೇವಾಲಯ
ಹಳೇಬೀಡು ಹೊಯ್ಸಳೇಶ್ವರ ದೇವಾಲಯ (ಕೇತಮಲ್ಲ ನಿರ್ಮಿಸಿದನು)
ಸೋಮನಾಥಪುರ ಕೇಶವ ದೇವಾಲಯ
ಹರಿಹರ ಹರಿಹರೇಶ್ವರ ದೇವಾಲಯ
ಮಂಡಗದ್ದೆ ಲಕ್ಷ್ಮೀನರಸಿಂಹ ದೇವಾಲಯ
ಗೋವಿಂದ ಹಳ್ಳಿ ತತ್ಪುರುಷ ಶಿವಲಿಂಗ ದೇವಾಲಯ

2.7K viewsಸಂಜಯ್ ವಂಶಿ, 17:32
ओपन / कमेंट
2023-04-28 20:23:16 ಭಾರತದಲ್ಲಿರುವ ಮಣ್ಣಿನ ಪ್ರಕಾರಗಳು

      ಪರ್ವತ ಮಣ್ಣು

ಕೊಳೆತ ಜೈವಿಕಾಂಶಗಳನ್ನು ಅಧಿಕ ಪ್ರಮಾಣದಲ್ಲಿ ಈ ಮಣ್ಣು ಹೊಂದಿದೆ .

ಪರ್ವತಗಳಲ್ಲಿ ನಿರ್ಮಾಣಗೊಂಡ ಈ ಮಣ್ಣು ಇಳಿಜಾರಿನ ಮೈದಾನಕ್ಕೆ ಇಳಿದು ಬರುತ್ತದೆ .

ಇದು ಸಾರಜನಕ ಮತ್ತು ಸಾವಯವ ಅವಶೇಷಗಳನ್ನು ಹೆಚ್ಚಾಗಿ ಒಳಗೊಂಡಿದ್ದು , ಕಾಫಿ , ಚಹಾ , ಸಾಂಬಾರ ಪದಾರ್ಥಗಳು ಮತ್ತು ಹಣ್ಣುಗಳಿಗೆ ಸೂಕ್ತವಾಗಿದೆ .

ಹಿಮಾಲಯದ ಪಾದ ಬೆಟ್ಟಗಳು , ಜಮ್ಮು ಮತ್ತು ಕಾಶ್ಮೀರ , ಹಿಮಾಚಲ ಪ್ರದೇಶ , ಉತ್ತರಾಖಂಡ , ಬಿಹಾರ , ಪಶ್ಚಿಮ ಬಂಗಾಳ ಮತ್ತು ಪರ್ವತ ಪ್ರದೇಶಗಳಲ್ಲಿ ಹರಡಿಕೊಂಡಿದೆ.

ಮರುಭೂಮಿ ಮಣ್ಣು

ಅತಿ ಕಡಿಮೆ ಮಳೆ ಮತ್ತು ಅಧಿಕ ಉಷ್ಣಾಂಶದ ಪ್ರದೇಶದಲ್ಲಿ ಮರಳು ಮಣ್ಣು ನಿರ್ಮಾಣಗೊಳ್ಳುತ್ತದೆ .

ಭಾರತದಲ್ಲಿ ಈ ಮಣ್ಣು ಸುಮಾರು 1.4 ಲಕ್ಷ ಚ.ಕಿ.ಮೀ ಪ್ರದೇಶದಲ್ಲಿ ಹರಡಲ್ಪಟ್ಟಿದೆ .

ಸಜ್ಜೆ , ಖರ್ಜೂರ ಇತ್ಯಾದಿಗಳನ್ನು ಬೆಳೆಯಬಹುದು . ಭಾರತದ ವಾಯವ್ಯ ಭಾಗದ ರಾಜಸ್ತಾನ , ಪಂಜಾಬ ಮತ್ತು ಹರಿಯಾಣ ರಾಜ್ಯಗಳಲ್ಲಿ ಹಾಗೂ ಪಶ್ಚಿಮದ ಗುಜರಾತಿನ ಕಛ ಪ್ರದೇಶ ಹಾಗೂ ಅರಾವಳಿ ಶ್ರೇಣಿಯ ಪಶ್ಚಿಮ ಭಾಗದಲ್ಲಿ ಹಂಚಿಕೆಯಾಗಿದೆ .

ಜಂಬಿಟ್ಟಿಗೆ ( ಲ್ಯಾಟ್‌ರೈಟ್ ) ಮಣ್ಣು

ಜಂಬಿಟ್ಟಿಗೆ ಮಣ್ಣು ಸಾಮಾನ್ಯವಾಗಿ 200 ಸೆಂ.ಮೀಗಳಿಗಿಂತ ಹೆಚ್ಚು ಮಳೆ ಬೀಳುವ ಪ್ರದೇಶಗಳಲ್ಲಿ ನಿರ್ಮಿತಗೊಂಡಿದೆ .

ಅಧಿಕ ಮಳೆಯಿಂದ ಮಣ್ಣಿನಲ್ಲಿರುವ ಲವಣಾಂಶಗಳು ತೊಳೆಸಲ್ಪಟ್ಟು ಕೇವಲ ಕಬ್ಬಿಣದ ಆಕ್ಸೆಡ್ ಮತ್ತು ಅಲ್ಯುಮಿನಿಯಂ ಹೆಚ್ಚಾಗಿರುವುದರಿಂದ ಈ ಮಣ್ಣು ಕೆಂಪು ಬಣ್ಣವನ್ನು ಹೊಂದಿರುವುದು .

ಜಂಬಿಟ್ಟಿಗೆ ಮಣ್ಣಿನಲ್ಲಿ ಫಲವತ್ತತೆ ಅತಿ ಕಡಿಮೆ ಸಾರಜನಕ ಮತ್ತು ಲವಣಗಳ ಕೊರತೆಯನ್ನು ಈ ಮಣ್ಣಿನಲ್ಲಿ ಕಾಣಬಹುದು.

ಪಶ್ಚಿಮ ಘಟ್ಟಗಳು , ವಿಂಧ್ಯ , ಸಾತ್ಪುರ ಮತ್ತು ರಾಜಮಹಲ್ ಬೆಟ್ಟಗಳು ಹಾಗೂ ಪೂರ್ವಾಚಲ ಪ್ರದೇಶಗಳಲ್ಲಿ ಈ ಮಣ್ಣು ವ್ಯಾಪಕವಾಗಿ ಹರಡಿದೆ.

ಕೆಂಪು ಮಣ್ಣು

ಕೆಂಪು ಮಣ್ಣು ಪರ್ಯಾಯ ಪ್ರಸ್ಥಭೂಮಿಯಲ್ಲಿ ಹೆಚ್ಚು ವಿಸ್ತಾರವಾಗಿ ಹರಡಿರುವ ಮಣ್ಣಿನ ಪ್ರಕಾರವಾಗಿದೆ .

ಇದು ಸುಮಾರು 5.20 ಲಕ್ಷ ಚ.ಕಿ.ಮೀ ಭೂ ಪ್ರದೇಶದಲ್ಲಿ ಕಂಡುಬರುವುದು .

ಇದು ದಕ್ಷಿಣದಲ್ಲಿ ಕನ್ಯಾಕುಮಾರಿಯಿಂದ ಉತ್ತರದಲ್ಲಿ ಮಧ್ಯಪ್ರದೇಶದ ಝಾನ್ಸಿಯವರೆಗೆ ಹಬ್ಬಿದೆ .

ಪಶ್ಚಿಮದಲ್ಲಿ ಗುಜರಾತಿನ ಕಛ ಪ್ರದೇಶದಿಂದ ಪೂರ್ವದಲ್ಲಿ ಜಾರ್ಖಂಡನ ರಾಜಮಹಲ್ ಬೆಟ್ಟಗಳವರೆಗೂ ಹರಿಡಿದೆ.

ಕಪ್ಪು ಮಣ್ಣು

ಕಪ್ಪು ಮಣ್ಣನ್ನು ` ರೇಗಾರ್ ಮಣ್ಣು ' ಎಂತಲೂ ಕರೆಯುತ್ತಾರೆ .

ಈ ಮಣ್ಣು ಹತ್ತಿ ಬೆಳೆಗೆ ಬಹು ಸೂಕ್ತವಾಗಿದೆ .

ಈ ಮಣ್ಣು ಅಗ್ನಿ ಶಿಲೆಗಳ ಶಿಥಿಲೀಕರಣದಿಂದ ಉತ್ಪತ್ತಿಯಾಗಿದೆ.

ಕಪ್ಪು ಮಣ್ಣಿನ ಪ್ರದೇಶವನ್ನು ಡೆಕ್ಕನ್ ಟ್ರಾಪ್ ಎಂದು ಸಹ ಕರೆಯುತ್ತಾರೆ .

ಇದು ಮಹಾರಾಷ್ಟ್ರ , ಗುಜರಾತ್ , ಮಧ್ಯಪ್ರದೇಶ , ಆಂಧ್ರ ಪ್ರದೇಶದ ಪಶ್ಚಿಮ ಭಾಗ ಮತ್ತು ಉತ್ತರ ಕರ್ನಾಟಕದಲ್ಲಿ ಹೆಚ್ಚಾಗಿ ಕಂಡು ಬರುತ್ತದೆ .

ಮೆಕ್ಕಲು ಮಣ್ಣು

ನದಿಗಳು ಪರ್ವತ ಪ್ರದೇಶಗಳಿಂದ ಹೊತ್ತು ತಂದು ಸಂಚಯಿಸಿರುವ ಮಣ್ಣಿಗೆ ಮೆಕ್ಕಲು ಮಣ್ಣು ಎನ್ನುವರು .

ಭಾರತದಲ್ಲಿ ಮೆಕ್ಕಲು ಮಣ್ಣು ಇತರ ಎಲ್ಲಾ ಬಗೆಯ ಮಣ್ಣುಗಳಿಗಿಂತ ಹೆಚ್ಚು ವಿಸ್ತಾರವಾದ ಪ್ರದೇಶದಲ್ಲಿ ಹರಡಿರುವುದು .

ಈ ಮಣ್ಣು ಸುಮಾರು 7.7 ದಶಲಕ್ಷ ಚ.ಕಿ.ಮೀ ಪ್ರದೇಶದಲ್ಲಿ ಕಂಡುಬರುವುದು .

ಇದು ಉತ್ತರ ಪ್ರದೇಶ , ಬಿಹಾರ , ಪಶ್ಚಿಮ ಬಂಗಾಳ , ಒಡಿಸಾ , ಪಂಜಾಬ , ಹರಿಯಾಣ ಅಸ್ಸಾಂ ರಾಜ್ಯದ ಬ್ರಹ್ಮಪುತ್ರಾ ಕಣಿವೆಯ ಭಾಗವನ್ನು ಆವರಿಸಿದೆ .
2.4K viewsಸಂಜಯ್ ವಂಶಿ, 17:23
ओपन / कमेंट
2023-04-28 15:36:45
ᴄᴀɴ ᴜ ɢᴜᴇꜱꜱ ᴛʜᴇ ᴀɴꜱᴡᴇʀ...?
ᴡɪᴛʜ ᴇxᴩʟᴀɪɴ ᴀɴꜱᴡᴇʀ ɴᴇᴇᴅ

ɪɴ ᴛʜɪꜱ qᴜᴇꜱᴛɪᴏɴ ᴅᴀᴛᴀ ɪꜱ ɪɴꜱᴜꜰꜰɪᴄɪᴇɴᴛ ᴛᴏ ᴀɴꜱᴡᴇʀ

ᴀ. ನಿಮ್ಮ ಆಪ್ಷನ್ ᴀ ಆಗಿದ್ರೆ ಇಲ್ಲಿ ಗಮನಿಸಬಹುದಾದ ಅಂಶ ರಾಜ್ಯಸಭೆಯ ಸದಸ್ಯರು ರಾಜ್ಯ ವಿಧಾನಸಭೆಯಿಂದ ಆಯ್ಕೆ ಆಗಿರುತ್ತಾರೆ ಆದರೆ ಎಲ್ಲರೂ ಅಲ್ಲ.

ʙ. ನಿಮ್ಮ ಆಪ್ಷನ್ ಬಿ ಆಗಿದ್ದರೆ ಉಪರಾಷ್ಟ್ರಪತಿಯಾಗಲು ರಾಜ್ಯಸಭೆಯ ಅರ್ಹತೆಯನ್ನು ಹೊಂದಿರಬೇಕು, ಆದರೆ ರಾಜ್ಯಸಭೆದವರೇ ಆಗಿರಬೇಕೆಂಬ ಎಂಬುವುದು ಅರ್ಥವಲ್ಲ.

ᴄ. ರಾಜ್ಯಸಭೆಯವರು ಯಾವ ರಾಜ್ಯದಿಂದ ಬೇಕಾದರೂ ಸ್ಪರ್ಧಿಸಬಹುದು ಉದಾಹರಣೆಗೆ ನಿರ್ಮಲಾ ಸೀತಾರಾಮನ್ ತಮಿಳುನಾಡು ದವರಾಗಿ ಬೆಂಗಳೂರಿನಿಂದ ಸ್ಪರ್ಧಿಸಿದ್ದಾರೆ.

ᴅ. ರಾಜ್ಯಸಭೆಯಿಂದ ಮಂತ್ರಿ ಆಗಬಹುದು ಉದಾರಣೆಗೆ ನಿರ್ಮಲ ಸೀತಾರಾಮ್.
2.9K viewsꜱᴜʀᴇꜱʜ ɢᴜʀɪᴋᴀʀ, edited  12:36
ओपन / कमेंट
2023-04-28 13:48:58 Explained | What will the new National Quantum Mission achieve? - The Hindu
https://www.thehindu.com/sci-tech/science/national-quantum-mission-india-science/article66788784.ece
3.0K viewsTHEJAS , 10:48
ओपन / कमेंट
2023-04-28 06:14:10 ‘Green steel’, or the steel produced through processes that do not emit carbon dioxide, essentially means using hydrogen as the ‘reducing agent’ (remover of oxygen) in steel production. In other words, iron ore is basically iron oxide and hydrogen is used to pull oxygen away from iron oxide, leaving pure iron behind—to which a little carbon is added to make steel. Right now, carbon, in the form of coke, has been used for pulling away oxygen; when carbon joins hands with oxygen it becomes carbon dioxide, which is today mankind’s greatest enemy. Hydrogen can do the job of coke just as well. 
3.3K viewsTHEJAS , edited  03:14
ओपन / कमेंट