Get Mystery Box with random crypto!

🎯 KPSC Materials 🎯

टेलीग्राम चैनल का लोगो kpscmaterials — 🎯 KPSC Materials 🎯 K
टेलीग्राम चैनल का लोगो kpscmaterials — 🎯 KPSC Materials 🎯
चैनल का पता: @kpscmaterials
श्रेणियाँ: शिक्षा
भाषा: हिंदी
ग्राहकों: 94
चैनल से विवरण

ನಮ್ಮ ಚಾನಲ್ ನಲ್ಲಿ KPSC ಗೆ ಸಂಭಂದ ಪಟ್ಟ MINI NOTE ಲಭ್ಯವಿರುತ್ತದೆ
🎯 KPSC Materials 🎯

Ratings & Reviews

3.50

2 reviews

Reviews can be left only by registered users. All reviews are moderated by admins.

5 stars

1

4 stars

0

3 stars

0

2 stars

1

1 stars

0


नवीनतम संदेश 60

2021-02-18 19:51:53

ಪ್ರಚಲಿತ

ವಿಶ್ವದ ಅತ್ಯಂತ ಹಳೆಯ ಡಿಎನ್‌ಎ ಗುರುತಿಸಿದ ವಿಜ್ಞಾನಿಗಳು
================
ಸುಮಾರು 12 ಲಕ್ಷ ವರ್ಷಗಳಷ್ಟು ಹಳೆಯದಾದ ಬೃಹತ್‌ ಗಜದ ಪಳಯುಳಿಕೆಯಿಂದ ಡಿಎನ್‌ಎಯನ್ನು ವಿಜ್ಞಾನಿಗಳು ಗುರುತಿಸಿದ್ದಾರೆ. ಇದು ಅಳಿವಿನಂಚಿನಲ್ಲಿರುವ ದೈತ್ಯ ಸಸ್ತನಿಯೊಂದು ಶೀತ ಹವಾಮಾನಕ್ಕೆ ಹೇಗೆ ಹೊಂದಿಕೊಳ್ಳುತ್ತದೆ ಎಂಬುದರ ಬಗ್ಗೆ ಬೆಳಕು ಚೆಲ್ಲುತ್ತದೆ.
=======
ಇದಕ್ಕೂ ಮೊದಲು ಅಂದರೆ 780–560 ಸಾವಿರ ವರ್ಷಗಳಷ್ಟು ಹಿಂದೆ ಲಭ್ಯವಾಗಿದ್ದ ಕುದುರೆಯ ತಳಿಯ ಡಿಎನ್ಎ ವಂಶವಹಿಯನ್ನೇ ಅತ್ಯಂತ ಹಳೆಯದು ಎನ್ನಲಾಗಿತ್ತು.  ಈ ಕುರಿತ ಅಧ್ಯಯನ ಮಾಹಿತಿಯೊಂದು  ನೇಚರ್ ಪತ್ರಿಕೆಯಲ್ಲಿ ಪ್ರಕಟವಾಗಿದೆ.
=====
ಸ್ವಿಡನ್‌ನ ನ್ಯಾಚುರಲ್‌ ಹಿಸ್ಟರಿ ಮ್ಯೂಸಿಯಂನ ವಿಜ್ಞಾನಿಗಳೂ ಸೇರಿದಂತೆ ಸಂಶೋಧಕರ ಪ್ರಕಾರ, ಇದೇ ಮೊದಲ ಬಾರಿಗೆ 10 ಲಕ್ಷ ವರ್ಷಕ್ಕಿಂತ ಹಳೆಯದಾದ ಮಾದರಿ ಡಿಎನ್‌ಎ ವಂಶವಾಹಿಯನ್ನು ಗುರುತಿಸಿ ದೃಢಪಡಿಸಲು ಸಾಧ್ಯವಾಗಿದೆ.
=========
‘ಈ ಡಿಎನ್‌ಎ ನಿಜಕ್ಕೂ ನಂಬಲಾಗದಷ್ಟು ಹಳೆಯದು’ ಎಂದು ಸ್ವೀಡನ್‌ನ ಸ್ಟಾಕ್‌ಹೋಮ್‌ ಸೆಂಟರ್‌ ಫಾರ್‌ ಪ್ಯಾಲಿಯೋಜೆನೆಟಿಕ್ಸ್‌ನ ಹಿರಿಯ ಸಂಶೋಧಕ ಲವ್‌ ಡೇಲೆನ್‌ ತಿಳಿಸಿದ್ದಾರೆ.

===========
4.7K views"ಮಾಹಿತಿ ವೇದಿಕೆ"- ಗೋವಿಂದ ರೆಡ್ಡಿ, 16:51
ओपन / कमेंट
2021-02-18 19:21:56 ಪ್ರಚಲಿತ

ಕೆರೊಲಿನದಲ್ಲಿ ಗರ್ಭಪಾತ ನಿಷೇಧ–ಮಸೂದೆಗೆ ಅಂಗೀಕಾರ
==============
ಕೆಲವು ನಿರ್ದಿಷ್ಟ ಕಾರಣ ಹೊರತುಪಡಿಸಿ ಗರ್ಭಪಾತವನ್ನು ಸಂಪೂರ್ಣ ನಿಷೇಧಿಸುವ ಮಸೂದೆಯೊಂದನ್ನು ದಕ್ಷಿಣ ಕೆರೊಲಿನಾ ರಾಜ್ಯದ ಶಾಸನಸಭೆ ಅಂಗೀಕರಿಸಿದೆ.
=================
ಗರ್ಭಿಣಿಯರ ಸ್ವಾತಂತ್ರ್ಯವನ್ನು ರಕ್ಷಣೆ ಮಾಡುವಂತಹ ಹಾಗೂ ಗರ್ಭಪಾತಕ್ಕೆ ಅವಕಾಶ ನೀಡುವ ‘ರೋಯಿ ವಿ. ವೇಡ್‘ ನಿಯಮ ಸದ್ತ ಅಮೆರಿಕದಲ್ಲಿ ಅಸ್ತಿತ್ವದಲ್ಲಿದ್ದು, ಸುಪ್ರೀಂ ಕೋರ್ಟ್‌ ತೀರ್ಪು ನೀಡಿದರೆ ಮಾತ್ರ ಇದನ್ನು ಬದಲಿಸಲು ಸಾಧ್ಯವಿದೆ. ದಕ್ಷಿಣ ಕೆರೊಲಿನಾದಂತೆ ಅಮೆರಿಕದ 12ಕ್ಕೂ ಅಧಿಕ ರಾಜ್ಯಗಳಲ್ಲಿ ಈಗಾಗಲೇ ಗರ್ಭಪಾತವನ್ನು ಸಂಪೂರ್ಣ ನಿಷೇಧಿಸುವ ಮಸೂದೆಗೆ ಅಂಗೀಕಾರ ನೀಡಲಾಗಿದೆ. ಆದರೆ ಇದನ್ನು ವಿರೋಧಿಸುವವರ ಸಂಖ್ಯೆಯೂ ದೊಡ್ಡದಾಗಿದ್ದು, ಎಲ್ಲಾ ರಾಜ್ಯಗಳಲ್ಲೂ ದಾವೆ ಹೂಡಿದ್ದಾರೆ. ಹೀಗಾಗಿ ಕೋರ್ಟ್‌ ತಡೆಯಾಜ್ಞೆಯ ಕಾರಣ ಯಾವೊಂದು ರಾಜ್ಯದಲ್ಲೂ ಇದು ಅನುಷ್ಠಾನಕ್ಕೆ ಬಂದಿಲ್ಲ.‌
=================
ದಕ್ಷಿಣ ಕರೊಲಿನಾ ಮಸೂದೆ:
================
‘ಗರ್ಭಪಾತಕ್ಕೆ ಮೊದಲು ವೈದ್ಯರು ಅಲ್ಟ್ರಾಸೌಂಡ್‌ ಪರೀಕ್ಷೆ ಮೂಲಕ ಭ್ರೂಣಕ್ಕೆ ಹೃದಯಬಡಿತ ಇದೆಯೇ ಎಂಬುದನ್ನು ಪರೀಕ್ಷಿಸಬೇಕು. ಇದೆ ಎಂದಾದರೆ ಗರ್ಭಪಾತ ಮಾಡುವಂತಿಲ್ಲ.  ಅತ್ಯಾಚಾರ, ಬಲಾತ್ಕಾರದಿಂದ ಸಂಭೋಗ ಅಥವಾ ತಾಯಿಯ ಜೀವಕ್ಕೆ ಅಪಾಯ ಇದೆ ಎಂಬ ಸಂದರ್ಭಗಳನ್ನು ಹೊರತುಪಡಿಸಿ ಉಳಿದ ಯಾವ ಸಂದರ್ಭದಲ್ಲೂ ಗರ್ಭಪಾತ ಮಾಡುವಂತಿಲ್ಲ. ಮಾಡಿದ್ದೇ ಆದರೆ ಮಾಡಿಸಿಕೊಂಡ ಮಹಿಳೆಗೆ ಶಿಕ್ಷೆ ಇಲ್ಲ, ಬದಲಿಗೆ ಗರ್ಭಪಾತ ಮಾಡಿ ಆರೋಪ ಸಾಬೀತುಗೊಂಡ ವೈದ್ಯರಿಗೆ 2 ವರ್ಷ ಜೈಲು, 10 ಸಾವಿರ ಡಾಲರ್ ದಂಡ ವಿಧಿಸಬಹುದಾಗಿದೆ’ ಎಂದು ಮಸೂದೆಯಲ್ಲಿ ತಿಳಿಸಲಾಗಿದೆ.

=====
4.9K views"ಮಾಹಿತಿ ವೇದಿಕೆ"- ಗೋವಿಂದ ರೆಡ್ಡಿ, 16:21
ओपन / कमेंट
2021-02-18 18:32:37

ಪ್ರಚಲಿತ

ಟೋಕಿಯೊ ಒಲಿಂಪಿಕ್ಸ್ ಆಯೋಜನಾ ಸಮಿತಿಗೆ ಹಶಿಮೊಟೊ ಅಧ್ಯಕ್ಷೆ
=====================
ಮಾಜಿ ಒಲಿಂಪಿಯನ್‌ ಸೀಕೊ ಹಶಿಮೊಟೊ ಅವರು ಟೋಕಿಯೊ ಒಲಿಂಪಿಕ್ಸ್ ಆಯೋಜನಾ ಸಮಿತಿಯ ಅಧ್ಯಕ್ಷೆಯಾಗಿ ಗುರುವಾರ ನೇಮಕಗೊಂಡಿದ್ದಾರೆ. ಜಪಾನ್‌ನ ರಾಜಕೀಯ ಅಧಿಕಾರದಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆ ವಿರಳವಾಗುತ್ತಿದೆ ಎಂಬ ಚರ್ಚೆ ನಡೆಯುವ ಹೊತ್ತಿನಲ್ಲಿ ಈ ಆಯ್ಕೆ ಗಮನಸೆಳೆದಿದೆ.
===================
ಹಶಿಮೊಟೊ ಅವರು ಪ್ರಧಾನಮಂತ್ರಿ ಯೋಶಿಹಿದೆ ಸುಗಾ ಅವರ ಸಂಪುಟದಲ್ಲಿ ಒಲಿಂಪಿಕ್ಸ ಸಚಿವೆಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಲಿಂಗ ಸಮಾನತೆ ಹಾಗೂ ಮಹಿಳಾ ಸಬಲೀಕರಣ ಖಾತೆಗಳನ್ನೂ ಅವರು ಹೊಂದಿದ್ದರು.
===============
56 ವರ್ಷದ ಹಶಿಮೊಟೊ ಮೂರು ಬೇಸಿಗೆ ಒಲಿಂಪಿಕ್ಸ್‌ಗಳಲ್ಲಿ (1988, 92 ಹಾಗೂ 96) ಸೈಕ್ಲಿಂಗ್‌ ವಿಭಾಗದಲ್ಲಿ ಮತ್ತು ನಾಲ್ಕು ಚಳಿಗಾಲದ ಒಲಿಂಪಿಕ್‌ ಕೂಟಗಳಲ್ಲಿ (1984, 88, 92 ಹಾಗೂ 94) ಸ್ಪೀಡ್‌ಸ್ಕೇಟಿಂಗ್ ವಿಭಾಗದಲ್ಲಿ ಸ್ಪರ್ಧಿಸಿದ್ದರು. 1992ರಲ್ಲಿ ಸ್ಪೀಡ್‌ಸ್ಕೇಟಿಂಗ್ ವಿಭಾಗದಲ್ಲಿ ಕಂಚಿನ ಪದಕ ಗೆದ್ದುಕೊಂಡಿದ್ದಾರೆ.

===============
5.1K views"ಮಾಹಿತಿ ವೇದಿಕೆ"- ಗೋವಿಂದ ರೆಡ್ಡಿ, 15:32
ओपन / कमेंट
2021-02-18 17:02:06

ಪ್ರಚಲಿತ

ಐಪಿಎಲ್ ಇತಿಹಾಸದಲ್ಲೇ ಅತಿ ಹೆಚ್ಚು ಬೆಲೆಗೆ ಮಾರಾಟವಾದ ಕ್ರಿಕೆಟರ್ಸ್
=====================
ಕ್ರಿಸ್ ಮೊರಿಸ್ 16.25 ಕೋಟಿ ರು
(ರಾಜಸ್ಥಾನ್ ರಾಯಲ್ಸ್ -2021)
ಯುವರಾಜ್ ಸಿಂಗ್ 16 ಕೋಟಿ ರು
(ಡೆಲ್ಲಿ ಡೇರ್ ಡೆವಿಲ್ಸ್ -2015)
ಪ್ಯಾಟ್ ಕಮಿನ್ಸ್ 15.5 ಕೋಟಿ ರು
(ಕೆಕೆಆರ್ 2020)
ಗೌತಮ್ ಗಂಭೀರ್ 14.9 ಕೋಟಿ ರು
(ಕೆಕೆಆರ್ 2011)
ಬೆನ್ ಸ್ಟೋಕ್ಸ್ 14.5 ಕೋಟಿ ರು
(ರೈಸಿಂಗ್ ಪುಣೆ ಸೂಪರ್ ಜೈಂಟ್ಸ್ -2017)
ಗ್ಲೆನ್ ಮ್ಯಾಕ್ಸ್ ವೆಲ್ 14.25 ಕೋಟಿ ರು
(ಆರ್ ಸಿಬಿ- 2021)
ಯುವರಾಜ್ ಸಿಂಗ್ 14 ಕೋಟಿ ರು
(ಆರ್ ಸಿಬಿ -2014)
ಬೆನ್ ಸ್ಟೋಕ್ಸ್ 12.5 ಕೋಟೀ ರು
(ರಾಜಸ್ಥಾನ ರಾಯಲ್ಸ್ 2018)

5.5K views"ಮಾಹಿತಿ ವೇದಿಕೆ"- ಗೋವಿಂದ ರೆಡ್ಡಿ, 14:02
ओपन / कमेंट
2021-02-18 13:31:10
ಪ್ರಚಲಿತ

ಐಪಿಎಲ್ ಶೀರ್ಷಿಕೆ ಪ್ರಾಯೋಜಕತ್ವ ಉಳಿಸಿಕೊಂಡ ವಿವೋ ಕಂಪನಿ
====================
ಕಳೆದ ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್) ಪಂದ್ಯಾವಳಿ ಪ್ರಾರಂಭಕ್ಕೂ ಮುನ್ನವೇ ಚೀನಾ ಮೂಲದ ಸಂಸ್ಥೆ ವಿವೊ ಟೈಟಲ್ ಪ್ರಾಯೋಜಕತ್ವದಿಂದ ಹಿಂದೆ ಸರಿದಿದ್ದು ನೆನಪಿರಬಹುದು. ಶೀರ್ಷಿಕೆ ಪ್ರಾಯೋಜಕತ್ವ ಅವಧಿ ವಿಸ್ತರಿಸದಿರಲು ವಿವೋ ನಿರ್ಧರಿಸಿದೆ ಎಂಬ ಸುದ್ದಿಯೂ ಹಬ್ಬಿತ್ತು. ಆದರೆ, ವಿವೋ ತನ್ನ ಪ್ರಯೋಜಕತ್ವವನ್ನು ಮುಂದುವರೆಸಲು ನಿರ್ಧರಿಸಿದೆ..
ಐಪಿಎಲ್ ಚೇರ್ಮನ್
"ಬ್ರಿಜೇಶ್ ಪಟೇಲ್"

====================
5.6K views"ಮಾಹಿತಿ ವೇದಿಕೆ"- ಗೋವಿಂದ ರೆಡ್ಡಿ, 10:31
ओपन / कमेंट