Get Mystery Box with random crypto!

ಇರಾಕ್‌ಗೆ ಮರಳಿದ ಪ್ರಾಚೀನ ಮಣ್ಣಿನ ಟ್ಯಾಬ್ಲೆಟ್ 30 ವರ್ಷಗಳ ಹಿಂದೆ ಇರಾಕ | 🎯 KPSC Materials 🎯

ಇರಾಕ್‌ಗೆ ಮರಳಿದ ಪ್ರಾಚೀನ ಮಣ್ಣಿನ ಟ್ಯಾಬ್ಲೆಟ್

30 ವರ್ಷಗಳ ಹಿಂದೆ ಇರಾಕಿನ ವಸ್ತುಸಂಗ್ರಹಾಲಯದಿಂದ ಕಳ್ಳಸಾಗಣೆಯಾಗಿದ್ದ 3,500 ವರ್ಷಗಳ ಹಳೆಯ ಜೇಡಿಮಣ್ಣಿನ ಟ್ಯಾಬ್ಲೆಟ್ ಅಂತಿಮವಾಗಿ ಇರಾಕ್‌ಗೆ ಮರಳಿ ಬರುತ್ತಿದೆ

ಅಸ್ಸಿರಿಯಾದ ರಾಜ ಅಸ್ಸೂರ್ ಬಾನಿಪಾಲ್ ಅವರ ಗ್ರಂಥಾಲಯದ ಅವಶೇಷಗಳಲ್ಲಿ 12-ಟ್ಯಾಬ್ಲೆಟ್ ಸಂಗ್ರಹದ ಭಾಗವಾಗಿ ಮಣ್ಣಿನ ಟ್ಯಾಬ್ಲೆಟ್ 1853ರಲ್ಲಿ ಪತ್ತೆಯಾಗಿತ್ತು. ಇದನ್ನು ಗಿಲ್ಗಮೇಶ್ ಡ್ರೀಮ್ ಟ್ಯಾಬ್ಲೆಟ್ ಎಂದು ಕರೆಯಲಾಗುತ್ತದೆ. 2003ರಲ್ಲಿ ಇದನ್ನು ಕಾನೂನುಬಾಹಿರವಾಗಿ ಅಮೆರಿಕಕ್ಕೆ ಆಮದು ಮಾಡಿಕೊಳ್ಳಲಾಗಿತ್ತು. ನಂತರ ಅದು ಮಾರಾಟವಾಗಿ, ಅಂತಿಮವಾಗಿ ರಾಷ್ಟ್ರ ರಾಜಧಾನಿಯ ಬೈಬಲ್ ಮ್ಯೂಸಿಯಂನಲ್ಲಿ ಪ್ರದರ್ಶನಕ್ಕೆ ಇಡಲಾಗಿತ್ತು

ಗುರುವಾರ ಮಧ್ಯಾಹ್ನ ಇರಾಕ್‌ನ ಅಧಿಕಾರಿಗಳನ್ನು ಒಳಗೊಂಡಿರುವ ಅಮೆರಿಕನ್ ಇಂಡಿಯನ್ ಸ್ಮಿತ್ಸೋನಿಯನ್ ನ್ಯಾಷನಲ್ ಮ್ಯೂಸಿಯಂನಲ್ಲಿ ನಡೆದ ಸಮಾರಂಭದಲ್ಲಿ ಗಿಲ್ಗಮೇಶ್ ಡ್ರೀಮ್ ಟ್ಯಾಬ್ಲೆಟ್ ಅನ್ನು ಇರಾಕ್‌ಗೆ ಹಸ್ತಾಂತರಿಸಲಾಯಿತು.