Get Mystery Box with random crypto!

ದೂರಸಂಪರ್ಕ ಚಿಕಿತ್ಸೆಗೆ ಕೈಕೊಟ್ಟ ವೈದ್ಯ ವಿದ್ಯಾರ್ಥಿಗಳ ಮೇಲೆ ಡಿಸಿಎಂ ಬೇ | Kannada News Daily

ದೂರಸಂಪರ್ಕ ಚಿಕಿತ್ಸೆಗೆ ಕೈಕೊಟ್ಟ ವೈದ್ಯ ವಿದ್ಯಾರ್ಥಿಗಳ ಮೇಲೆ ಡಿಸಿಎಂ ಬೇಸರ

ಬೆಂಗಳೂರು, ಮೇ 25: ರಾಜ್ಯ ಕೋವಿಡ್‌ ಕಾರ್ಯಪಡೆ ಮುಖ್ಯಸ್ಥರೂ ಆದ ಡಿಸಿಎಂ ಡಾ.ಸಿ.ಎನ್.‌ಅಶ್ವತ್ಥ್ ನಾರಾಯಣ ಹೋಮ್‌ ಐಸೋಲೇಶನ್ ಚಿಕಿತ್ಸೆಯ ಬಗ್ಗೆ ಅವಲೋಕನ ಮಾಡಿದರು. ಕೋವಿಡ್‌ ಹೋಮ್‌ ಐಸೋಲೇಶನ್‌ ವ್ಯವಸ್ಥೆಯಲ್ಲಿ ಟೆಲಿಕನ್ಸಲ್‌ಟೆನ್ಸಿ ಮೂಲಕ ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿರುವ ಸ್ಟೆಪ್‌ಡೌನ್‌ ವ್ಯವಸ್ಥೆಯ ಬಗ್ಗೆ ಪರಾಮರ್ಶೆಯನ್ನು ಡಿಸಿಎಂ ನಡೆಸಿದ್ದಾರೆ. ಈ ಸಂದರ್ಭದಲ್ಲಿ ದೂರಸಂಪರ್ಕದ ಮೂಲಕ ಸೋಂಕಿತರಿಗೆ ಚಿಕಿತ್ಸೆ ನೀಡಲು ಮುಂದೆ ಬಾರದ ವಿದ್ಯಾರ್ಥಿಗಳ ವರ್ತನೆಗೆ ಡಿಸಿಎಂ ಅತೀವ ಬೇಸರ ವ್ಯಕ್ತಪಡಿಸಿದರು. ಬೆಂಗಳೂರಿನಲ್ಲಿ ಮಂಗಳವಾರ ವರ್ಚುವಲ್‌ ವೇದಿಕೆ ಮೂಲಕ ʼಸ್ಟೆಪ್‌ಡೌನ್‌ʼ ವ್ಯವಸ್ಥೆಯ ಪ್ರಗತಿ ಪರಿಶೀಲನೆಯನ್ನು ಡಿಸಿಎಂ ನಡೆಸಿದರು. ಈ ಸಂದರ್ಭದಲ್ಲಿ ಎರಡನೇ ಅಲೆಯಲ್ಲಿ ಹೋಮ್ ಐಸೋಲೇಶನ್ ವ್ಯವಸ್ಥೆ ಆಪ್ತರಕ್ಷಕನಂತೆ ಬದಲಾಗಿದೆ.ಕೋವಿಡ್‌ ಕುರಿತ ಎಲ್ಲಾ ಲೇಟೆಸ್ಟ್‌ ಅಪ್‌ಡೇಟ್ಸ್‌ ಓದಿ

View full article