Get Mystery Box with random crypto!

ಹಿಡಕಲ್ ಜಲಾಶಯದಿಂದ 7 ದಿನ ನೀರು ಬಿಡುಗಡೆ: ಬಾಲಚಂದ್ರ ಜಾರಕಿಹೊಳಿ ಗೋ | Kannada News Daily

ಹಿಡಕಲ್ ಜಲಾಶಯದಿಂದ 7 ದಿನ ನೀರು ಬಿಡುಗಡೆ: ಬಾಲಚಂದ್ರ ಜಾರಕಿಹೊಳಿ

ಗೋಕಾಕ: 'ಜನ ಹಾಗೂ ಜಾನುವಾರುಗೆ ಕುಡಿಯುವ ಉದ್ದೇಶಕ್ಕಾಗಿ ಹಿಡಕಲ್ ಜಲಾಶಯದಿಂದ ಘಟಪ್ರಭಾ ಕಾಲುವೆಗಳಿಗೆ ಮೇ 27ರಿಂದ 7 ದಿನಗಳವರೆಗೆ ನೀರು ಬಿಡುಗಡೆ ಮಾಡಲಾಗುವುದು' ಎಂದು ಕೆಎಂಎಫ್‌ ಅಧ್ಯಕ್ಷರೂ ಆಗಿರುವ ಅರಭಾವಿ ಬಿಜೆಪಿ ಶಾಸಕ ಬಾಲಚಂದ್ರ ಜಾರಕಿಹೊಳಿ ತಿಳಿಸಿದ್ದಾರೆ. 'ಘಟಪ್ರಭಾ ಎಡದಂಡೆ ಕಾಲುವೆ ಮತ್ತು ಘಟಪ್ರಭಾ ಬಲದಂಡೆ ಕಾಲುವೆಗಳಿಗೆ ತಲಾ 1.50 ಟಿಎಂಸಿ ಹಾಗೂ ಸಿಬಿಸಿ ಕಾಲುವೆಗೆ 0.50 ಟಿಎಂಸಿ ನೀರು ಹರಿಸಲಾಗುವುದು. ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಅವರಿಗೆ ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಚರ್ಚಿಸಿ ಮನವರಿಕೆ ಮಾಡಿಕೊಟ್ಟಿದ್ದೇನೆ.

View full article