Get Mystery Box with random crypto!

ಕೊರೊನಾ ಇದೆ ಎಚ್ಚರಿಕೆ: ಮಹಾರಾಷ್ಟ್ರಕ್ಕಿಂತ ಕರ್ನಾಟಕವೇ ಡೇಂಜರ್! ಬೆಂಗ | Kannada News Daily

ಕೊರೊನಾ ಇದೆ ಎಚ್ಚರಿಕೆ: ಮಹಾರಾಷ್ಟ್ರಕ್ಕಿಂತ ಕರ್ನಾಟಕವೇ ಡೇಂಜರ್!

ಬೆಂಗಳೂರು, ಮೇ 13: ಕರ್ನಾಟಕವು ಕೊರೊನಾವೈರಸ್ ಸೋಂಕಿತ ಪ್ರಕರಣಗಳಲ್ಲಿ ಮಹಾರಾಷ್ಟ್ರದೊಂದಿಗೆ ಪೈಪೋಟಿಗೆ ಇಳಿದಂತೆ ಕಾಣುತ್ತಿದೆ. ಪ್ರತಿನಿತ್ಯ ಎರಡು ರಾಜ್ಯಗಳಲ್ಲಿ ಅತಿಹೆಚ್ಚು ಕೊವಿಡ್-19 ಸೋಂಕಿತ ಪ್ರಕರಣಗಳು ವರದಿ ಆಗುತ್ತಿರುವುದು ಆತಂಕ ಸೃಷ್ಟಿಸಿದೆ. ಭಾರತದಲ್ಲಿ ಪತ್ತೆಯಾಗುವ ಒಟ್ಟು ಕೊವಿಡ್-19 ಪ್ರಕರಣಗಳ ಪೈಕಿ ಮಹಾರಾಷ್ಟ್ರದಲ್ಲಿ ಶೇ.11.75ರಷ್ಟು ಪ್ರಕರಣಗಳು ವರದಿಯಾದರೆ ಕರ್ನಾಟಕದಲ್ಲಿ 11.34ರಷ್ಟು ಹೊಸ ಸೋಂಕಿತ ಪ್ರಕರಣಗಳು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿವೆ. ಮಹಾನಗರಗಳಿಂದ ಹಳ್ಳಿಗಳಿಗೆ ಶಿಫ್ಟ್ ಆಗುತ್ತಿರುವ ಕೊರೊನಾವೈರಸ್! ಕಳೆದ ಸೋಮವಾರ ಮಹಾರಾಷ್ಟ್ರದಲ್ಲಿ ಒಂದೇ ದಿನ 37,236 ಕೊವಿಡ್-19 ಸೋಂಕಿತ ಪ್ರಕರಣಗಳು ವರದಿಯಾದರೆ, ಕರ್ನಾಟಕದಲ್ಲಿ ಅದೇ ದಿನ 39,305 ಹೊಸ ಕೊರೊನಾವೈರಸ್ ಸೋಂಕಿತ ಪ್ರಕರಣಗಳು ಪತ್ತೆಯಾಗಿದ್ದವು.

View full article