Get Mystery Box with random crypto!

'ರಿಮೋಟ್‌ನಲ್ಲಿ ಚಾನಲ್ ಬದಲಿಸುವ ಆಯ್ಕೆಯೂ ಇದೆಯಲ್ಲ' ಬೆಂಗಳೂರು(ಮೇ 12) | Kannada News Daily

'ರಿಮೋಟ್‌ನಲ್ಲಿ ಚಾನಲ್ ಬದಲಿಸುವ ಆಯ್ಕೆಯೂ ಇದೆಯಲ್ಲ'

ಬೆಂಗಳೂರು(ಮೇ 12) ಕೋವಿಡ್ ನಿಂದ ಸಾವನ್ನಪ್ಪುವ ದೃಶ್ಯಗಳಿಗೆ ಮಾಧ್ಯಮದಲ್ಲಿ ನಿರ್ಬಂಧ ಕೋರಿ ನ್ಯಾಯಾಲಯಕ್ಕೆ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆದಿದೆ. ಲೆಟ್ಸ್ ಕಿಟ್ ಫೌಂಡೇಶನ್ ಪಿಐಎಲ್ ಸಲ್ಲಿಸಿತ್ತು. ಮಾಧ್ಯಮಗಳು ಜೀವಭಯದ ಫೋಬಿಯಾ ಹುಟ್ಟಿಸುತ್ತಿವೆ ಕೋವಿಡ್ ನಿಂದ ನರಳುವ ಸಾವಿನ ದೃಶ್ಯ ಪ್ರಸಾರ ಮಾಡುತ್ತಿವೆ. ಸೋಂಕಿತರಲ್ಲಿ ಸಾವಿನ ಭೀತಿ ಹುಟ್ಟಿಸುವ ರೀತಿಯಲ್ಲಿ ಸುದ್ದಿ ಪ್ರಸಾರ ಮಾಡಲಾಗುತ್ತಿದೆ ಎಂದು ಆರೋಪಿಸಿತ್ತು. ಇಂಥ ದೃಶ್ಯಗಳು ಜನರಲ್ಲಿ ಭಯ, ಆತಂಕ, ಖಿನ್ನತೆ ಮೂಡಿಸುತ್ತಿದೆ ಚಿತಾಗಾರಗಳ ದೃಶ್ಯಗಳನ್ನು ಪ್ರಸಾರ ಮಾಡಲಾಗುತ್ತಿದೆ. ವೀಕ್ಷಕರಿಗೆ ಮಾನಸಿಕ ಒತ್ತಡವಾಗಿ ಸಾವು ಸಂಭವಿಸಬಹುದು. ಮಾಧ್ಯಮಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ಡಿಸಾಸ್ಟರ್ ಮ್ಯಾನೇಜ್ ಮೆಂಟ್ ಕಾಯ್ದೆಯಡಿ ಕ್ರಮ ತೆಗೆದುಕೊಳ್ಳಬೇಕು ಎಂದು ಮನವಿ ಮಾಡಿಕೊಂಡಿತ್ತು.

View full article