Get Mystery Box with random crypto!

_ಇಂದಿನಿಂದ ಪ್ರಾರಂಭವಾದ 86ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾದ *ಡ | 🌎ಸ್ಪರ್ಧಾಯುಗ🌎

_ಇಂದಿನಿಂದ ಪ್ರಾರಂಭವಾದ 86ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾದ *ಡಾ:ದೊಡ್ಡರಂಗೇಗೌಡರ* ಬಗ್ಗೆ ಸಂಕ್ಷಿಪ್ತ ಮಾಹಿತಿ _


ಕವಿ= *ಡಾ|| ದೊಡ್ಡರಂಗೇಗೌಡರು*

ಜನನ= *07 ಫೆಬ್ರವರಿ 1946*

ಊರು= *ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಕುರುಬರಹಳ್ಳಿಯಲ್ಲಿ*

ತಂದೆ= *ಶ್ರೀ ಕೆ. ರಂಗೇಗೌಡರು*

ತಾಯಿ= *ಶ್ರೀಮತಿ ಅಕ್ಕಮ್ಮ*

ಕಾವ್ಯನಾಮ = *ಮನುಜ*

ಹಾವೇರಿಯಲ್ಲಿ ನಡೆಯುತ್ತಿರುವ *86ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಆಗಿದ್ದಾರೆ*

(85ನೇ ಕನ್ನಡ ಸಾಹಿತ್ಯ ಸಮ್ಮೇಳನ = *ಶ್ರೀ ಎಚ್, ಎಸ್ ವೆಂಕಟೇಶ್ ಮೂರ್ತಿ* =2020 ಕಲ್ಬುರ್ಗಿ ಯಲ್ಲಿ ಜರಗಿತ್ತು

*ಕವನ ಸಂಕಲನಗಳು*
1) "ಕಣ್ಣು ನಾಲಿಗೆ ಕಡಲು ಕಾವ್ಯ"
2) "ಜಗುಲಿ ಹತ್ತಿ ಇಳಿದು"
3) "ನಾಡಾಡಿ"
4) "ಮೌನ‌ ಸ್ಪಂದನ"
5) "ಕುದಿಯುವ ಕುಲುಮೆ"
‌6) "ಚದುರಂಗಗ ಕುದುರೆಗಳು"
7) "ಯುಗವಾಣಿ"
8) "ಬದುಕು ತೋರಿದ ಬೆಳಕು"
9) "ಏಳು ಬೀಳಿನ ಹಾದಿ"
10) "ಅವತಾರ ಐಸಿರಿ"
11) "ಹೊಸಹೊನಲು"
12) "ಲೋಕಾಯಣ"
13) "ನಿಕ್ಷೇಪ"
14) "ಗೆಯ್ಮೆ"

*ಗದ್ಯ ಕೃತಿಗಳು*

1) "ವರ್ತಮಾನದ ವ್ಯಂಗ್ಯದಲ್ಲಿ"
2) "ವಿಚಾರ ವಾಹಿನಿ"
3) "ವಿಶ್ವ ಮುಖಿ"
4)"ದಾರಿ ದೀಪಗಳು"

*ಪ್ರವಾಸ ಸಾಹಿತ್ಯ*

1) "ಅನನ್ಯನಾಡು ಅಮೇರಿಕ"
2) "ಪಿರಮಿಡ್ಡುಗಳ ಪರಿಸರದಲ್ಲಿ"

*ಕನ್ನಡ ಚಲನಚಿತ್ರದಲ್ಲಿ ಗೀತಸಾಹಿತ್ಯ (ಗೀತೆಗನ್ನು ಬರೆದಿದ್ದಾರೆ. ಆ ಕನ್ನಡ ಚಲನಚಿತ್ರಗಳು*

1)"ರಂಗನಾಯಕಿ"
2)"ಪರಸಂಗದ ಗೆಂಡೆತಿಮ್ಮ"
3)"ಆಲೆಮನೆ"
4)"ಅನುಪಮ"
5)"ಅರುಣರಾಗ"
6)"ಮುದುಡಿದ ತಾವರೆ ಅರಳಿತು"
7)"ಏಳು ಸುತ್ತಿನ ಕೋಟೆ"
8)"ಅಶ್ವಮೇಧ"
9)"ಹೃದಯಗೀತೆ"
10)"ಭೂಲೋಕದಲ್ಲಿ ಯಮರಾಜ"
11)"ಜನುಮದ ಜೋಡಿ"
12)"ಕುರುಬನ ರಾಣಿ"
13)"ರಮ್ಯ ಚೈತ್ರಕಾಲ"
14)"ತಂದೆಗೆ ತಕ್ಕ ಮಗ"
15)"ಪಡುವಾರಳ್ಳಿ
16)ಪಾಂಡವರು"
17)"ಸಾಧನೆ ಶಿಖರ"

*ಭಾವಗೀತೆಗಳು*
1)"ಮಾವು-ಬೇವು"
2)"ಪ್ರೇಮ ಪಯಣ"
3)"ಕಾವ್ಯ-ಕಾವೇರಿ"
4)"ನಲ್ಮೆ ನೇಸರ"
5)"ಅಂತರಂಗದ ಹೂ ಬನ"

*ಪ್ರಶಸ್ತಿ/ಪುರಸ್ಕಾರಗಳು*

1982ರಲ್ಲಿ ಗೌಡರು 'ಆಲೆಮನೆ' ಚಿತ್ರಕ್ಕಾಗಿ ಬರೆದ ಭಾವೈಕ್ಯ ಗೀತೆಗೆ ಸರ್ಕಾದಿಂದ ವಿಶೇಷ ಗೀತೆ ಪ್ರಶಸ್ತಿ ಹಾಗೂ ಬೆಳ್ಳಿ ಪದಕದೊಂದಿಗೆ ಸನ್ಮಾನ ದೊರೆಯಿತು. *ವಿಶೇಷ ಗೀತೆ ಪ್ರಶಸ್ತಿ ಪಡೆದ ಮೊದಲ ಸಾಹಿತಿ ಇವರು.*

ನಾಲ್ಕು ಬಾರಿ ಉತ್ತಮ ಗೀತರಚನೆಗೆ ರಾಜ್ಯ ಪ್ರಶಸ್ತಿ

*ರಾಜ್ಯೋತ್ಸವ ಪ್ರಶಸ್ತಿ*

*ಪದ್ಮಶ್ರೀ ಪ್ರಶಸ್ತಿ - 2018*

"ಕಣ್ಣು ನಾಲಿಗೆ ಕಡಲು ಕಾವ್ಯ" - ಕೃತಿಗೆ *ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ 1972.*

"ಪ್ರೀತಿ ಪ್ರಗಾಥ ಕೃತಿಗೆ" ಕನ್ನಡ ಸಾಹಿತ್ಯ ಪರಿಷತ್ತಿನಿಂದ *ರತ್ನಾಕರವರ್ಣಿ-ಮುದ್ದಣ ಕಾವ್ಯ ಪ್ರಶಸ್ತಿ 1990*

==================