Get Mystery Box with random crypto!

ಬೀದಿ ಬದಿ ವ್ಯಾಪಾರಿಗಳಿಗೆ 5,000 ಕಿರು ಸಾಲ ನೀಡುವ 'ಸ್ವಾನಿಧಿ ಯೋಜನೆ' ' | Karnataka state police.

ಬೀದಿ ಬದಿ ವ್ಯಾಪಾರಿಗಳಿಗೆ 5,000 ಕಿರು ಸಾಲ ನೀಡುವ 'ಸ್ವಾನಿಧಿ ಯೋಜನೆ' 'ಡಿಸೆಂಬರ್ 2024'ರವರೆಗೆ ವಿಸ್ತರಣೆ |PM Swanidhi Yojana

ಕಳೆದ ತಿಂಗಳು ಡಿಸೆಂಬರ್ನಲ್ಲಿಯೇ ಪ್ರಧಾನ ಮಂತ್ರಿ ಸ್ವಾನಿಧಿ ಯೋಜನೆಯನ್ನ ಡಿಸೆಂಬರ್ 2024 ರವರೆಗೆ ವಿಸ್ತರಿಸಲಾಗಿದೆ. ಮೊದಲು ಅದರ ಕೊನೆಯ ದಿನಾಂಕ 31 ಮಾರ್ಚ್ 2023 ರವರೆಗೆ ಇತ್ತು. ಈ ಯೋಜನೆಯಡಿ ಸಣ್ಣ ಉದ್ಯಮಿಗಳು ಮತ್ತು ಬೀದಿ ಬದಿ ವ್ಯಾಪಾರಿಗಳಿಗೆ ಸಾಲ ನೀಡಲಾಗುತ್ತದೆ

ಸ್ವಾನಿಧಿ ಯೋಜನೆಯ ಬಗ್ಗೆ ತಿಳಿಯಿರಿ

ಪ್ರಧಾನ ಮಂತ್ರಿ ಬೀದಿ ವ್ಯಾಪಾರಿಗಳ ಸ್ವಾವಲಂಬಿ ನಿಧಿ (SVANidhi) ಯೋಜನೆಯನ್ನ ಜೂನ್ 2020ರಲ್ಲಿ ಮೈಕ್ರೋ ಲೋನ್ ಸೌಲಭ್ಯವಾಗಿ ಪ್ರಾರಂಭಿಸಲಾಯಿತು. ಕೋವಿಡ್-19 ಸಾಂಕ್ರಾಮಿಕ ರೋಗದಿಂದಾಗುವ ನಷ್ಟವನ್ನ ಸರಿದೂಗಿಸಲು ಬೀದಿ ವ್ಯಾಪಾರಿಗಳಿಗೆ ಅಧಿಕಾರ ನೀಡುವುದು ಈ ಯೋಜನೆಯ ಉದ್ದೇಶವಾಗಿದೆ. ಇನ್ನು PM ಸ್ವಾನಿಧಿ ಯೋಜನೆಯ ಕೊನೆಯ ದಿನಾಂಕವನ್ನು 2024 ರವರೆಗೆ ವಿಸ್ತರಿಸಲಾಗಿದೆ