Get Mystery Box with random crypto!

ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಪ್ರಮುಖ ಕ್ರಾಂತಿಗಳು . ಬೆಳ್ಳಿನಾ | Karnataka state police.

ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಪ್ರಮುಖ ಕ್ರಾಂತಿಗಳು .

ಬೆಳ್ಳಿನಾರು (ರಜತನಾರು) ಕ್ರಾಂತಿ

ಬಿಳಿಯ ಚಿನ್ನ ಎಂದು ಕರೆಯುವ ಹತ್ತಿಯ ಉತ್ಪಾದನೆ ಹೆಚ್ಚಿಸಲು ಈ ಕ್ರಾಂತಿಯನ್ನು ಜಾರಿಗೆ ತರಲಾಯಿತು.

ರಜತ ಕ್ರಾಂತಿ

ಮೊಟ್ಟೆ ಉತ್ಪಾದನೆ ಕೋಳಿ ಸಾಕಾಣಿಕೆಯಲ್ಲಿ ಅಭಿವೃದ್ಧಿ ತರಲು ಜಾರಿಗೆ ತಂದ ಈ ಕ್ರಾಂತಿಯನ್ನು ಬೆಳ್ಳಿ ಕ್ರಾಂತಿ ಎಂತಲೂ ಕರೆಯುವರು.

ಬೂದು ಕ್ರಾಂತಿ

ನೈಟ್ರೋಜನ್ (ಸಾರಜನಕ) ಆಧಾರಿತ ರಸಗೊಬ್ಬರಗಳ ಬಳಕೆಯನ್ನು ಹೆಚ್ಚಿಸಲು ಈ ಕ್ರಾಂತಿಯನ್ನು ಜಾರಿಗೆ ತರಲಾಯಿತು.

ಸ್ವರ್ಣ ಕ್ರಾಂತಿ

ಹಣ್ಣುಗಳು, ತೋಟಗಾರಿಕಾ ಬೆಳೆಗಳು, ಜೇನಿನ ಉತ್ಪಾದನೆಯಲ್ಲಿ ಪ್ರಗತಿಯನ್ನು ಸಾಧಿಸಲು ಈ ಕ್ರಾಂತಿಯನ್ನು ಜಾರಿಗೆ ತರಲಾಯಿತು.

ಕಂದು ಕ್ರಾಂತಿ

ಕಂದು ಕ್ರಾಂತಿಯು ಚರ್ಮದ ಉತ್ಪಾದನೆಗಳು ಮತ್ತು ಕೋಕೋ  (ಕಾಫಿ) ಬೆಳೆಗೆ ಸಂಬಂಧಿಸಿದಾಗಿದೆ.

ಗುಲಾಬಿ ಕ್ರಾಂತಿ

ಗುಲಾಬಿ ಕ್ರಾಂತಿಯು ಔಷಧಿ ಸಸ್ಯಗಳು, ಈರುಳ್ಳಿ ಮತ್ತು ಸಮುದ್ರದ ಚಿಕ್ಕ ಜೀವಿಗಳಾದ ಸೀಗಡಿ, ಏಡಿಗಳ ಉತ್ಪಾದನೆಗೆ ಸಂಬಂಧಿಸಿದುದಾಗಿದೆ.

ವೃತ್ತ ಕ್ರಾಂತಿ

ಬಟಾಟೆ (ಆಲೂಗಡ್ಡೆ) ಬೆಳೆಗೆ ಸಂಬಂಧಿಸಿದ ಇದನ್ನು ದುಂಡು ಕ್ರಾಂತಿ ಎಂತಲೂ ಕರೆಯುವರು.

ಕೆಂಪು ಕ್ರಾಂತಿ

ಕೆಂಪು ಕ್ರಾಂತಿಯು ಮಾಂಸ ಮತ್ತು ಟೊಮ್ಯಾಟೊಗಳಿಗೆ ಸಂಬಂಧಿಸಿದು. ವಿಶಾಲ್ ತೆವಾರಿಯವರನ್ನು ಕೆಂಪು ಕ್ರಾಂತಿಯ ಪಿತಾಮಹ ಎನ್ನುವರು.

ಕಪ್ಪು ಕ್ರಾಂತಿ

ಪೆಟ್ರೋಲಿಯಂ ಮತ್ತು ಕಲ್ಲಿದ್ದಿಲಿನ ಬಳಕೆಯಲ್ಲಿ ಸುಧಾರಣೆಯನ್ನು ತರಲು ಕಪ್ಪುಕ್ರಾಂತಿಯನ್ನು ತಂದರು.

ಹಳದಿ ಕ್ರಾಂತಿ

ಹಳದಿ ಕ್ರಾಂತಿಯು ಎಣ್ಣೆಕಾಳುಗಳಿಗೆ ಸಂಬಂಧಿಸಿದಾಗಿದೆ.

ನೀಲಿ ಕ್ರಾಂತಿ

ನೀಲಿ ಕ್ರಾಂತಿಯು ಮೀನು ಹಾಗೂ ಮೀನಿನ ಉತ್ಪನ್ನಗಳಿಗೆ (ಮತ್ಸ್ಯೋದ್ದಮ) ಸಂಬಂಧಿಸಿದಾಗಿದೆ.

ಶ್ವೇತ ಕ್ರಾಂತಿ  (ಕ್ಷೀರ ಕ್ರಾಂತಿ)

ಶ್ವೇತ ಕ್ರಾಂತಿಯು ಹಾಲಿನ ತ್ಪಾದನೆಗೆ ಸಂಬಂಧಿಸುದಾಗಿದೆ. ಈ ಕ್ರಾಂತಿಯನ್ನು ಆಪರೇಷನ್ ಫ್ಲಡ್ ಎಂದು ಸಹ ಕರೆಯುವರು.