Get Mystery Box with random crypto!

44 ರಾಷ್ಟ್ರಗಳಲ್ಲಿ ಭಾರತದ ರೂಪಾಂತರ ಕೊರೊನಾವೈರಸ್ ತಳಿ! ನವದೆಹಲಿ, ಮೇ | Kannada News Daily

44 ರಾಷ್ಟ್ರಗಳಲ್ಲಿ ಭಾರತದ ರೂಪಾಂತರ ಕೊರೊನಾವೈರಸ್ ತಳಿ!

ನವದೆಹಲಿ, ಮೇ 11: ಭಾರತದಲ್ಲಿ ಕೊರೊನಾವೈರಸ್ ಎರಡನೇ ಅಲೆಯು ವೇಗವಾಗಿ ಹರಡಲು ಕಾರಣವಾಗಿರುವ B.1.617 ರೂಪಾಂತರ ರೋಗಾಣು 44 ರಾಷ್ಟ್ರಗಳಲ್ಲಿ ಪತ್ತೆಯಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯು ಮಾಹಿತಿ ನೀಡಿದೆ. ಕೊರೊನಾವೈರಸ್ ಸೋಂಕಿನ B.1.617 ರೂಪಾಂತರ ತಳಿಯ 2020ರ ಅಕ್ಟೋಬರ್ ತಿಂಗಳಿನಲ್ಲಿ ಮೊದಲ ಬಾರಿಗೆ ಭಾರತದಲ್ಲಿ ಪತ್ತೆಯಾಗಿತ್ತು. ಡಬ್ಲ್ಯುಹೆಚ್‌ಓ ವ್ಯಾಪ್ತಿಯ 44 ರಾಷ್ಟ್ರಗಳಿಂದ 4500 ಮಾದರಿಯನ್ನು ತಪಾಸಣೆಗೆ ಒಳಪಡಿಸಿದಾಗ ಇದೇ ರೂಪಾಂತರ ತಳಿ ಪತ್ತೆಯಾಗಿದೆ. ಹೆಚ್ಚುವರಿವಾಗಿ ಐದು ದೇಶಗಳಿಂದ ಸೋಂಕುಪತ್ತೆ ಹಚ್ಚುವುದಕ್ಕಾಗಿ ವಿಶ್ವ ಆರೋಗ್ಯ ಸಂಸ್ಥೆಯು ವರದಿ ಸ್ವೀಕರಿಸಿದೆ. ಭಾರತದ 13 ರಾಜ್ಯದಲ್ಲಿ ಸಕ್ರಿಯ ಪ್ರಕರಣ 1 ಲಕ್ಷಕ್ಕೂ ಅಧಿಕ ಭಾರತವನ್ನು ಹೊರತುಪಡಿಸಿದಂತೆ B.1.617 ರೂಪಾಂತರ ತಳಿಯಿಂದ ಅತಿಹೆಚ್ಚು ಅಪಾಯವನ್ನು ಎದುರಿಸುತ್ತಿರುವ ರಾಷ್ಟ್ರಗಳ ಪಟ್ಟಿಯಲ್ಲಿ ಬ್ರಿಟನ್ ಎರಡನೇ ಸ್ಥಾನದಲ್ಲಿ ಗುರುತಿಸಿಕೊಂಡಿದೆ. ಬ್ರೆಜಿಲ್ ಮತ್ತು ದಕ್ಷಿಣ ಆಫ್ರಿಕಾದಲ್ಲೂ ರೂಪಾಂತರ ತಳಿಯ ಅಟ್ಟಹಾಸ ಹೆಚ್ಚಾಗಿರುವುದು ಅಂಕಿ-ಅಂಶಗಳ ಸಹಿತ ಸಾಬೀತಾಗಿದೆ.

View full article