Get Mystery Box with random crypto!

ಕೋವಿಡ್ ಸೋಂಕಿತರಿಗೆ ಸಮಾಧಾನಕರ ಸುದ್ದಿ; ಬೆಂಗಳೂರಿಗೆ ಬಂತು ಆಕ್ಸಿಬಸ್ | Kannada News Daily

ಕೋವಿಡ್ ಸೋಂಕಿತರಿಗೆ ಸಮಾಧಾನಕರ ಸುದ್ದಿ; ಬೆಂಗಳೂರಿಗೆ ಬಂತು ಆಕ್ಸಿಬಸ್

ಬೆಂಗಳೂರು, ಮೇ 11: ರಾಜ್ಯದಲ್ಲಿ ಕೊರೊನಾ ಸೋಂಕು ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದ್ದು, ಕೋವಿಡ್ ಆಸ್ಪತ್ರೆಗಳಲ್ಲಿ ಬೆಡ್, ಆಕ್ಸಿಜನ್ ಮತ್ತು ವೆಂಟಿಲೇಟರ್ ಸಮಸ್ಯೆಗಳು ಎದುರಾಗುತ್ತಿವೆ. ಆದರೆ, ಈಗ ಕೊರೊನಾ ಸೋಂಕಿತರಿಗೆ ಸಮಾಧಾನ ತರುವ ಸುದ್ದಿಯೊಂದು ಸಿಕ್ಕಿದೆ. ಬೆಂಗಳೂರು ನಗರ ಸೋಂಕಿತರಿಗೆ ಆಕ್ಸಿಜನ್ ಸಮಸ್ಯೆ ನೀಗಿಸಲು ಆಕ್ಸಿಜನ್ ಬಸ್ ಬಂದಿದೆ. ತುರ್ತು ಸಂದರ್ಭದಲ್ಲಿ ತಕ್ಷಣವೇ ಸೋಂಕಿತರ ಜೀವ ಉಳಿಸಲಿದೆ. ಇಂದು (ಮಂಗಳವಾರ) ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ಆಕ್ಸಿಜನ್ ಬಸ್ ಅನ್ನು ಉದ್ಘಾಟಿಸಿ, ಅದು ಹೇಗೆ ಕಾರ್ಯನಿರ್ವಹಿಸಲಿದೆ ಎಂಬುದನ್ನು ಪರಿವೀಕ್ಷಣೆ ಮಾಡಿದ್ದಾರೆ. ತಮಿಳುನಾಡು ಮಾದರಿಯ ಆಕ್ಸಿಜನ್ ಬಸ್ಸನ್ನು ಕರ್ನಾಟಕಕ್ಕೂ ಪರಿಚಯಿಸಲಾಗಿದೆ. ಶಾಲೆಯ ಬಸ್ಸನ್ನು ಆಕ್ಸಿಜನ್ ಬಸ್ ಆಗಿ ಪರಿವರ್ತನೆ ಮಾಡಲಾಗಿದೆ.

View full article