Get Mystery Box with random crypto!

'The Lady With The Lamp' ಫ್ಲಾರೆನ್ಸ್ ನೈಟಿಂಗೇಲ್ 1820ರ ಮೇ 12ರಂದು | ⭐ಜಾಗೃತ್ ಕರ್ನಾಟಕ⭐

"The Lady With The Lamp" ಫ್ಲಾರೆನ್ಸ್ ನೈಟಿಂಗೇಲ್ 1820ರ ಮೇ 12ರಂದು ಫ್ಲಾರೆನ್ಸ್ (ಇಟಲಿ) ನಲ್ಲಿ ಜನಿಸಿದರು. ಇವರ ಜ್ಞಾಪಕಾರ್ಥವಾಗಿ ವಿಶ್ವ ದಾದಿಯರ ದಿನವನ್ನು May 12ರಂದು ಆಚರಿಸಲಾಗುತ್ತಿದೆ.

1965ರಿಂದ ಈ ದಿನಾಚರಣೆಯನ್ನು ಆಚರಿಸಲಾಗುತ್ತಿದೆ.

ಬ್ರಿಟನ್, ಪ್ರಾನ್ಸ್ ದೇಶಗಳು ರಷ್ಯಾ ವಿರುದ್ಧ 1853-1856ರವೆಗೆ ನಡೆಸಿದ ಕ್ರಿಮಿಯನ್ ಯುದ್ಧದ ಸಮಯದಲ್ಲಿ, ಅವಳಿಗೆ ಬ್ರಿಟಿಷ್ ಮತ್ತು ಮಿತ್ರ ಸೈನಿಕರ ಶುಶ್ರೂಷೆಯ ಉಸ್ತುವಾರಿ ವಹಿಸಲಾಯಿತು(38 ನರ್ಸ್'ಗಳ ತಂಡ). ಅವಳು ಇಡೀ ರಾತ್ರಿ ಕೈಯಲ್ಲಿ ದೀಪವ ಹಿಡಿದು ರಾತ್ರಿ ಸುತ್ತುಗಳನ್ನು ಹಾಕುತ್ತಾ ರೋಗಿಗಳನ್ನು ನೋಡಿಕೊಳ್ಳುತ್ತಿದ್ದಳು, ಆದ್ದರಿಂದ "Lady with the lamp" ಎಂದೂ ಪ್ರಸಿದ್ಧಳಾಗಿದ್ದಾಳೆ.

ಶುಶ್ರೂಷಾ ಶಿಕ್ಷಣವನ್ನು ಔಪಚಾರಿಕಗೊಳಿಸುವ ಅವರ ಪ್ರಯತ್ನದಿಂದಾಗಿ, ಲಂಡನ್‌ನ ಸೇಂಟ್ ಥೋಮಸ್ ಆಸ್ಪತ್ರೆಯಲ್ಲಿ ಮೊದಲ ವೈಜ್ಞಾನಿಕ ಆಧಾರಿತ ನರ್ಸಿಂಗ್ ಶಾಲೆ ನೈಟಿಂಗೇಲ್ ಸ್ಕೂಲ್ ಆಫ್ ನರ್ಸಿಂಗ್'ನ್ನು 1860ರಲ್ಲಿ ಪ್ರಾರಂಭಿಸಲಾಯಿತು.

ಶುಶ್ರೂಷಕಿಯರು & ದಾದಿಯರಿಗೆ ವರ್ಕ್‌ಹೌಸ್ ಆಸ್ಪತ್ರೆಗಳಲ್ಲಿ ತರಬೇತಿ ನೀಡುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದರು. 1907 ರಲ್ಲಿ ಆರ್ಡರ್ ಆಫ್ ಮೆರಿಟ್ ಪಡೆದ ಮೊದಲ ಮಹಿಳೆ ಇವರಾಗಿದ್ದಾರೆ.

Theme 2022
A Voice to Lead—Invest in Nursing & Respect Rights to Secure Global Health'

━━━━━━✧❂✧━━━━━